6

ಗಾಳಿ ನಿಲ್ಲಿಸಿದರೆ ವಿದ್ಯುತ್ ಕೊಡುವೆ ಅಂದ ಅಧಿಕಾರಿ!

ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೂರಿದ್ದು, ಈ ಬಗ್ಗೆ ಪ್ರಶ್ನಿಸಿದರೆ ನಿಂದಿಸುವ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಹಲವು ಕಡೆ ವಿದ್ಯುತ್ ಸರಬರಾಜು ಸರಿಯಾಗಿಲ್ಲ. ಮಂಗಳವಾರ ಶಾಲೆಗಳು ಶುರುವಾಗಿದ್ದು, ವಿದ್ಯುತ್ ಇಲ್ಲದ ಕಾರಣ ಅಲ್ಲಲ್ಲಿ ಮಕ್ಕಳ ಅಡುಗೆಗೆ ಸಹ ಸಮಸ್ಯೆಯಾಗಿದೆ. ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತೋಟದಕಲ್ಲಳ್ಳಿ, ಹುಣಸೆಮನೆ, ಕನೇನಳ್ಳಿ ಗ್ರಾಮಗಳ 150ಕ್ಕೂ ಅಧಿಕ ಕುಟುಂಬದವರು ಮೂರು ದಿನಗಳಿಂದ ಕತ್ತಲೆಯಲ್ಲಿದ್ದಾರೆ. ಯಲ್ಲಾಪುರ ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಹ ವಿದ್ಯುತ್ ಸರಿಯಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ `ಅಧಿಕಾರಿಯೊಬ್ಬರು ಅತ್ಯಂತ ಬೇಜವಬ್ದಾರಿಯಿಂದ ವರ್ತಿಸಿದರು’ ಎಂದು ಪ್ರದೀಪ ಯಲ್ಲಾಪುರ ಅಸಮಧಾನ ಹೊರಹಾಕಿದರು.
ಉಮಚ್ಗಿ ಬಳಿಯ ತೋಟದಕಲ್ಲಳ್ಳಿ ಗ್ರಾಮದ ನರಸಿಂಹ ವೆಂಕಟ್ರಮಣ ಹೆಗಡೆ ಅವರ ಸೊಪ್ಪಿನ ಬೆಟ್ಟದಲ್ಲಿ ಸೋಮವಾರ ವಿದ್ಯುತ್ ಕಂಬದ ಜೊತೆ ತಂತಿ ಹರಿದುಬಿದ್ದಿದ್ದು, ಈವರೆಗೂ ಸರಿಪಡಿಸಿದವರಿಲ್ಲ. ಇದರಿಂದ ನರಿಸರ, ಬಾಳೆಗದ್ದೆ, ಹುಣಸೆಮನೆ ಕತ್ತಲೆಯಲ್ಲಿದೆ. ಕನೇನಳ್ಳಿ ಗ್ರಾಮದ ಮನೆಗಳು ಸಹ ಮೂರು ದಿನಗಳಿಂದ ಬೆಳಕು ಕಂಡಿಲ್ಲ. `ಮೊದಲೆಲ್ಲ ವಿದ್ಯುತ್ ಸಮಸ್ಯೆ ಎಂದ ತಕ್ಷಣ ಅಧಿಕಾರಿಗಳು ಸ್ಪಂದಿಸುತ್ತಿದ್ದರು. ಇದೀಗ ಸ್ಪಂದಿಸುವ ಗುಣವೇ ಇಲ್ಲ’ ಎಂದು ಉಮ್ಮಚ್ಗಿಯ ಗ ರಾ ಭಟ್ಟ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕುಮಟಾದ ವಾಗಳ್ಳಿಯ ಮಹಿಳೆ ಪ್ರತಿ ರಾತ್ರಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದಾಗ ಮಹಿಳೆ ಜೊತೆ ಅಧಿಕಾರಿ ಉಡಾಪೆಯಿಂದ ಮಾತನಾಡಿದ್ದಾರೆ. `ಬೀಸುವ ಗಾಳಿ ತಡೆದರೆ ವಿದ್ಯುತ್ ಕೊಡುವೆ’ ಎಂದು ಅಧಿಕಾರಿ ಹೇಳಿದ್ದು ಸಹ ಆಕ್ರೋಶಕ್ಕೆ ಕಾರಣವಾಗಿದೆ.
ಉಡಾಪೆಯಿಂದ ಮಾತನಾಡಿದ ಹೆಸ್ಕಾಂ ಅಧಿಕಾರಿಯ ಆಡಿಯೋ ಇಲ್ಲಿ ಕೇಳಿ..

 

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page