6

ಅಂತಿಂಥ ಕಳ್ಳ ಇವನಲ್ಲ.. ಹಾಲು ಬಿಟ್ಟು ಬೇರೆನೂ ಕದಿಯಲ್ಲ!

ಭಟ್ಕಳದಲ್ಲಿ ವ್ಯಕ್ತಿಯೊಬ್ಬ ನಿತ್ಯ ಹಾಲಿನ ಪ್ಯಾಕೆಟ್ ಕದಿಯುತ್ತಿದ್ದು, ಇದು ಹಾಲು ಪೂರೈಸುವ ಕಂಪನಿಗೆ ದೊಡ್ಡ ತಲೆನೋವಾಗಿದೆ. ಹ್ಯಾಂಗ್ಯೋ ಕಂಪನಿಯ ಸಾವಿರಾರು ಲೀಟರ್ ಹಾಲು ತಾಲೂಕಿಗೆ ಬರುತ್ತಿದ್ದು, ಅದರಲ್ಲಿ ಅರ್ಧಕ್ಕೂ ಅಧಿಕ ಪಾಲು ಕಳ್ಳನಿಗೆ ಸೇರುತ್ತಿದೆ.
ರಂಗಿನಕಟ್ಟೆಯ ಬಳಿಯಲ್ಲಿ ಇಳಿಸುವ ಹಾಲಿನ ಕೊಟ್ಟೆಯನ್ನು ಈತ ನಿರಂತರವಾಗಿ ಅಪಹರಿಸುತ್ತಿದ್ದು, ಆತನ ಪತ್ತೆಗೆ ಕಂಪನಿಯವರು ಸಿಸಿ ಕ್ಯಾಮರಾ ಇರುವ ಕಡೆ ಹಾಲಿನ ಕೊಟ್ಟೆ ಇರಿಸಿದ್ದರು. ಕ್ಯಾಮರಾ ಇರುವುದನ್ನು ನೋಡಿಯೂ ಆತ ಕದಿಯುವ ಸಾಹಸ ಮಾಡಿದ್ದು, ಆ ದೃಶ್ಯಾವಳಿಗಳು ಸೆರೆಯಾಗಿದೆ. ಬೆಳಗ್ಗೆ 4 ಗಂಟೆಗೆ ಆಗಮಿಸುವ ಕಳ್ಳ ತನ್ನ ಕೈ ಚಳಕ ಪ್ರದರ್ಶಿಸಿದ್ದಾನೆ. ನಂತರ ಸಿಟ್ಟಾಗಿ ಅಲ್ಲಿದ್ದ ಸಿಸಿ ಕ್ಯಾಮರಾವನ್ನು ಒಡೆದು ಪರಾರಿಯಾಗಿದ್ದಾನೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕಳ್ಳನ ಚಲನ-ವಲನ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page