6

ಶಿರೂರು ಕಾರ್ಯಾಚರಣೆ ನಿಲ್ಲದಿದ್ದರೂ ಹುಡುಕಾಟ ಸ್ಥಗಿತ: ನಾಪತ್ತೆ ಆದವರಿಗೂ ಸಿಗಲಿದೆ ಪರಿಹಾರ

ಅಂಕೋಲಾ: `ಭೂ ಕುಸಿತ ವಲಯದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಜೋರಾಗಿರುವುದರಿಂದ ಯಾರು ಬಂದರೂ ಆಳದಲ್ಲಿ ಶೋಧ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಲಿದ್ದು, ನದಿ ಹರಿವು ಕಡಿಮೆ ಆದ ನಂತರ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.
ಭಾನುವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈಗಾಗಲೇ 8 ಶವ ಸಿಕ್ಕಿದೆ. ಇನ್ನು ಎಷ್ಟು ಶವ ಇದೆ ಎಂದು ಗೊತ್ತಿಲ್ಲ. ಮೂವರು ನಾಪತ್ತೆ ಆದ ಬಗ್ಗೆ ದೂರಿದ್ದು, ನಿಯಮಗಳ ಪ್ರಕಾರ 7 ವರ್ಷಗಳವರೆಗೆ ಅವರಿಗೆ ಪರಿಹಾರ ವಿತರಿಸಲು ಅಸಾಧ್ಯ. ಅದಾಗಿಯೂ ಅವರ ಕುಟುಂಬದವರ ಜೊತೆ ಅಗ್ರಿಮೆಂಟ್ ಮಾಡಿಕೊಂಡು ಮಾನವೀಯ ನೆಲೆಯಲ್ಲಿ ಪರಿಹಾರ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.
`ಮಣ್ಣಿನ ಅಡಿ ಲಾರಿ ಇತ್ತು ಎಂದು ಭಾವಿಸಿ ಅಲ್ಲಿ ಶೋಧ ನಡೆಸಲಾಯಿತು. ನೀರಿನ ಆಳದಲ್ಲಿ ಹುಡುಕಲಾಯಿತು. ಆದರೆ, ಅದು ಪತ್ತೆಯಾಗಿಲ್ಲ. ನೀರಿನಲ್ಲಿ ಮಣ್ಣು, ಕಲ್ಲು, ಮರ-ಗಿಡ ಎಲ್ಲವೂ ಇದೆ. ಹಾಗೆಂದ ಮಾತ್ರಕ್ಕೆ ಕಾರ್ಯಾಚರಣೆ ಎಂದಿಗೂ ನಿಲ್ಲಿಸುವುದಿಲ್ಲ. ಆದರೆ, ನೀರಿನಲ್ಲಿ ಇಳಿಯಲು ಸಾಧ್ಯವಿಲ್ಲ’ ಎಂದರು.

ಕೇoದ್ರ ಹೆದ್ದಾರಿ ಸಚಿವರು ಎಲ್ಲಿ?
`ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು ಇಲ್ಲಿ ಬಂದಿದ್ದಾರೆ. ಆದರೆ, ಇಷ್ಟು ದೊಡ್ಡ ದುರಂತ ನಡೆದರೂ ಕೇಂದ್ರ ಸಚಿವರು ಬಂದಿಲ್ಲ. ಅವರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಭಟ್ಕಳದಿಂದ ಕಾರವಾರದವರೆಗೆ ಸಮಸ್ಯೆಗಳಿದ್ದು, ಅದರ ಬಗ್ಗೆ ಹೇಳಿದರೂ ಐ ಆರ್ ಬಿ ಕಂಪನಿ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ದೂರಿದರು. `ಇದೀಗ ಹೊನ್ನಾವರ ಕಾಸರಗೋಡಿನಲ್ಲಿ ಹೆದ್ದಾರಿ ಮೇಲೆ ಮಣ್ಣು ಬಿದ್ದಿದೆ’ ಎಂದರು.
ಸಚಿವ ಮಂಕಾಳು ವೈದ್ಯ ಮಾತನಾಡಿದ ವಿಡಿಯೋ ಇಲ್ಲಿ ನೋಡಿ…

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page