ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಪರಿಸರ ಸಮೃದ್ಧತೆಯ ಊರು. ಪರಿಸರ ಪ್ರವಾಸೋದ್ಯಮದಿಂದ ಖ್ಯಾತಿಗಳಿಸಿರುವ ಇಲ್ಲಿ ಏನುಂಟು ಏನಿಲ್ಲ?!
ದೇಶದಲ್ಲಿಯೇ ಮೊದಲು ಎನಿಸಿಕೊಂಡ ಮರದ ಮೇಲಿನ ತೂಗು ಸೇತುವೆ ಜೊಯಿಡಾದಲ್ಲಿದೆ. ಮರದಿಂದ ಮರಕ್ಕೆ ಇರುವ ಸೇತುವೆ ಇದಾಗಿದೆ. ಇಲ್ಲಿ ಬಿಟ್ಟರೆ ಇಂಥ ಕೆನಾಫಿ ವಾಕ್ ನೋಡಲು ಮಲೆಶಿಯಾ ಅಥವಾ ಆಸ್ಟ್ರೇಲಿಯಾಗೆ ಹೋಗಬೇಕು.
ಜೊಯಿಡಾದಲ್ಲಿರುವ ಕೆನಾಫಿ ವಾಕ್ 240ಮೀ ಉದ್ದವಿದ್ದು, 10 ಕಡೆ ನಿಲುಗಡೆ ತಾಣವನ್ನು ಹೊಂದಿದೆ. ಈ ಕೆನಾಫಿ ವಾಕ್ ಮೂಲಕ ನಿತ್ಯ ಹಸಿರಿನ ಅರಣ್ಯ, ಪಕ್ಷಿ, ಪ್ರಾಣಿಗಳ ಚಲನವಲನಗಳ ಅಧ್ಯಯನ ಸಾಧ್ಯ.
ಕೆನಾಫಿ ವಾಕ್ ಕುರಿತು ಸುಕನ್ಯಾ ದೇಸಾಯಿ ಅವರು ವಿವರಿಸಿದ ವಿಡಿಯೋ ಇಲ್ಲಿ ನೋಡಿ..








