6

ಶಿರೂರು: ಶವ ತೆಗೆಯಲು ಅಮವಾಸ್ಯೆಗೆ ಮುಹೂರ್ತ!

`ಗಂಗಾವಳಿ ನದಿ ಆಳದಲ್ಲಿ ಸಿಲುಕಿದ ಶವ ತೆಗೆಯಲು ಅಗಸ್ಟ 3 ಹಾಗೂ 4ರಂದು ಸೂಕ್ತ ದಿನ’ ಎಂದು ಈಜುಗಾರ ಈಶ್ವರ ಮಲ್ಪೆ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂದು ಅಮವಾಸ್ಯೆಯಿದ್ದು, ಆ ದಿನ ನೀರಿನ ಏರಿಳಿತ ವ್ಯತ್ಯಾಸವಾಗುತ್ತದೆ. ಆ ದಿನ ಹರಿವು ಇಳಿಮುಖವಾಗುವ ಸಾಧ್ಯತೆಯಿದೆ’ ಎಂದವರು ಅನುಭವ ಹಂಚಿಕೊoಡರು. ಈ ಹಿನ್ನಲೆ ಅಗಸ್ಟ್ 3 ಹಾಗೂ 4ರಂದು ಶಿರೂರಿಗೆ ಆಗಮಿಸಿ ಕಾರ್ಯಾಚರಣೆ ನಡೆಸುವ ಬಗ್ಗೆ ಚಿಂತಿಸಲಾಗಿದೆ’ ಎಂದವರು ಹೇಳಿದರು. `ನೀರಿನ ಹರಿವು ವೀಕ್ಷಣೆಗೆ ಇಂದು ಇಲ್ಲಿ ಆಗಮಿಸಿದ್ದೆ. ಕಣ್ಮರೆಯಾದ ಜಗನ್ನಾಥ ಹಾಗೂ ಲೋಕೇಶನ ಮನೆಗೆ ತೆರಳಿ ಅವರ ಕುಟುಂಬದವರಿಗೆ ಧೈರ್ಯ ಹೇಳಿದ್ದೇನೆ’ ಎಂದು ತಿಳಿಸಿದರು.

ಮಾತುಕೊಟ್ಟಿರುವೆ:
`ಲೋಕೇಶ್ ಹಾಗೂ ಜಗನ್ನಾಥ ಕಣ್ಮರೆಯಾಗಿ 13 ದಿನವಾಗಿದ್ದು, ಅವರ ಶವವನ್ನಾದರೂ ಹುಡುಕಿಕೊಡುವೆ’ ಎಂದು ಕುಟುಂಬದವರಿಗೆ ಮಾತು ಕೊಟ್ಟಿದ್ದೇನೆ. ಇದರ ಜೊತೆ ಕೇರಳದ ಅರ್ಜುನ್’ನನ್ನು ಸಹ ಹುಡುಕುತ್ತೇನೆ. ನದಿ ಆಳದ ಮಣ್ಣು ತೆಗೆಯುವ ಯಂತ್ರ ಬರಲಿದ್ದು, ಅದು ಬಂದರೆ ಕಾರ್ಯಾಚರಣೆಗೆ ಅನುಕೂಲ. ಅಗಸ್ಟ್ 4ರಂದು 2 ತಾಸು ನೀರಿನಲ್ಲಿ ಮುಳುಗಿ ಕಾರ್ಯಾಚರಣೆ ನಡೆಸುವೆ’ ಎಂದು ಅವರು ಹೇಳಿದರು.
ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

 

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page