6

Leopard/ ಜನವಸತಿ ಪ್ರದೇಶಕ್ಕೆ ನುಗ್ಗಿದ ವನ್ಯಜೀವಿ: ಬಾಲ ಅಲ್ಲಾಡಿಸಿ ಕಿರುಚಿದ ಕಾರಣ ಬದುಕಿತು ಬಡಜೀವ!

ಯಲ್ಲಾಪುರ: ಪಟ್ಟಣದ ಅಂಚಿನ ತಟಗಾರ ವಸತಿ ಪ್ರದೇಶದಲ್ಲಿ ಭಾನುವಾರ ಸಂಜೆ ಚಿರತೆ  (Leopard) ಕಾಣಿಸಿಕೊಂಡಿದೆ.

ಸಂಜೆ 7.35ರ ವೇಳೆಗೆ ಜೋಗದಮನೆ ಅಂಗಳದಲ್ಲಿ ಚಿರತೆ ಓಡಾಟ ನಡೆಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಸಹ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ಚಲನ-ವಲನ ಸೆರೆಯಾಗಿದ್ದು ಇದೇ ಮೊದಲು. ತಟಗಾರ ಗ್ರಾಮದಲ್ಲಿ ಆಗಾಗ ಚಿರತೆ ಹಸು ಭಕ್ಷಿಸಿದ ನಿದರ್ಶನಗಳಿವೆ. ಯಲ್ಲಾಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ಇಡಗುಂದಿ ಅರಣ್ಯ ವಲಯದ ಗಡಿಭಾಗದಲ್ಲಿದೆ. ಪಟ್ಟಣದಿಂದ 4 ಕಿ.ಮೀ ಅಂತರದಲ್ಲಿದೆ.

ಈ ಭಾಗದಲ್ಲಿ ಕಾಡುಹಂದಿ, ಮುಳ್ಳಂದಿ, ಕಾಡುಕೋಣ ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳಿವೆ. ಕಾಡುಹಂದಿ ಹಾಗೂ ಮುಳ್ಳುಹಂದಿ ಕೃಷಿ-ತೋಟಗಾರಿಕಾ ಬೆಳೆ ಹಾನಿ ಮಾಡಿದ್ದು, ಈವರೆಗೆ ವನ್ಯಜೀವಿ ಜನವಸತಿ ಪ್ರದೇಶಕ್ಕೆ ನುಗ್ಗಿದ ನಿದರ್ಶನಗಳಿರಲಿಲ್ಲ. ಚಿರತೆ ಸಹ ಕೊಟ್ಟಿಗೆಗೆ ದಾಳಿ ಮಾಡಿ ಜಾನುವಾರುಗಳನ್ನು ಭಕ್ಷಿಸಿದ್ದು, ಜನ ವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿರಲಿಲ್ಲ.

ನಾಯಿಯನ್ನು ಗುರಿಯಾಗಿರಿಸಿಕೊಂಡು ಮನೆ ಅಂಗಳಕ್ಕೆ ಆಗಮಿಸಿದ ಚಿರತೆ  (Leopard) ಕೊನೆ ಕ್ಷಣದಲ್ಲಿ ನಾಯಿಯನ್ನು ಭಕ್ಷಿಸದೇ ಓಡಿದೆ. ತೋಟಗಾರಿಕಾ ಪ್ರದೇಶದಿಂದ ಬಂದ ಈ ವನ್ಯಜೀವಿ ಸಾರ್ವಜನಿಕ ಓಡಾಟದ ರಸ್ತೆ ಮೂಲಕ ಮತ್ತೆ ಕಾಡು ಸೇರಿದೆ. ಚಿರತೆ ಬಂದ ಹಾಗೂ ಹೋದ ಮಣ್ಣಿನ ಪ್ರದೇಶದಲ್ಲಿ ಹೆಜ್ಜೆ ಗುರುತುಗಳಾಗಿವೆ. ಆಹಾರ ಬಿಟ್ಟು ಹೋದ ಕಾರಣ ಚಿರತೆ ಮತ್ತೆ ಬರುವ ಸಾಧ್ಯತೆ ಹೆಚ್ಚಿದೆ.

ಚಿರತೆ ಚಲನ-ವಲನ ಸೆರೆಯಾದ ವಿಡಿಯೋ ಇಲ್ಲಿ ನೋಡಿ..

 

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page