6

Leopard: ಚಿರತೆ ಓಡಿಸಲು ಜಾಗಟೆ ಗಂಟೆ!

ಯಲ್ಲಾಪುರ: ತಟಗಾರ ಗ್ರಾಮದ ಜೋಗದಮನೆ ಅಂಗಳದಲ್ಲಿ ಕಾಣಿಸಿಕೊಂಡ ಚಿರತೆ (Leopard) ಓಡಿಸಲು ಅರಣ್ಯ ಇಲಾಖೆ ಜಾಗಟೆ ಹಾಗೂ ಗಂಟೆ ಸದ್ದಿನ ಪ್ರಯೋಗ ನಡೆಸಿದೆ.

ಭಾನುವಾರ ಸಂಜೆ ಜನ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು, ವಲಯ ಅರಣ್ಯಾಧಿಕಾರಿ ಡಿ ಎಲ್ ಮಿರ್ಜಾನಕರ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಅಲ್ತಾಪ ತಮ್ಮ ಸಿಬ್ಬಂದಿ ಜೊತೆ ಆಗಮಿಸಿ ಸ್ಥಳಪರಿಶೀಲನೆ ನಡೆಸಿದರು. ಚಿರತೆ ಹೆಜ್ಜೆ ಗುರುತುಗಳನ್ನು ಗಮನಿಸಿದ ಅವರು ದಾಖಲೆಗಳನ್ನು ಸಂಗ್ರಹಿಸಿದರು. ನಂತರ ಗಂಟೆ-ಜಾಗಟೆಗಳ ಸದ್ದು ಮಾಡುತ್ತ ಸುತ್ತಲಿನ ಕಾಡು ಪ್ರವೇಶಿಸಿದರು.

ಈ ವೇಳೆ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ವಸತಿ ಪ್ರದೇಶದಿಂದ ಸುತ್ತಲು 2 ಕಿಮೀ ಸಂಚಾರ ನಡೆಸಿ ಚಿರತೆಗಾಗಿ ಹುಡುಕಾಟ ನಡೆಸಲಾಯಿತು. ಆದರೆ, ಸೋಮವಾರ ಚಿರತೆ (Leopard) ಕಾಣಿಸಿಕೊಳ್ಳಲಿಲ್ಲ. `ಇನ್ನೂ ಒಂದು ವಾರಗಳ ಕಾಲ ನಿರಂತರವಾಗಿ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗುವುದು. ರಾತ್ರಿ ವೇಳೆ ಗಸ್ತು ತಿರುಗಿ ಶೋಧ ನಡೆಸಲಾಗುವುದು. ಅದಾಗಿಯೂ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಲ್ಲಿ ಮೇಲಧಿಕಾರಿಗಳ ಅಪ್ಪಣೆ ಪಡೆದು ಅದನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತೇವೆ’ ಎಂದು ವಲಯ ಅರಣ್ಯಾಧಿಕಾರಿ ಡಿ ಎಲ್ ಮಿರ್ನಾಕರ್ ತಿಳಿಸಿದರು.
ಚಿರತೆ ಓಡಿಸಲು ಜಾಗಟೆ-ಗಂಟೆ ಪ್ರಯೋಗ ನಡೆಸಿದ ವಿಡಿಯೋ ಇಲ್ಲಿ ನೋಡಿ..

ಚಿರತೆ ಕಾಣಿಸಿಕೊಂಡ ಕುರಿತು ಪ್ರಕಟವಾದ ವಿಡಿಯೋ ವರದಿ ಇಲ್ಲಿ ನೋಡಿ..

Leopard/ ಜನವಸತಿ ಪ್ರದೇಶಕ್ಕೆ ನುಗ್ಗಿದ ವನ್ಯಜೀವಿ: ಬಾಲ ಅಲ್ಲಾಡಿಸಿ ಕಿರುಚಿದ ಕಾರಣ ಬದುಕಿತು ಬಡಜೀವ!

 

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page