ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶಿರಸಿ (Sirsi ) ಮಂಗಳವಾರ ಬೆಳಗ್ಗೆ ನಗರದಲ್ಲಿ ಸೈಕಲ್ ತುಳಿದರು. ಈ ವೇಳೆ ಪೊಲೀಸರು ಸೈರನ್ ಮೊಳಗಿಸಿ ಅವರಿಗೆ ಭದ್ರತೆ ಒದಗಿಸಿದರು!
ಸ್ವಾತಂತ್ರೋತ್ಸವ (independence day) ಅಂಗವಾಗಿ ಜನ ಜಾಗೃತಿಗಾಗಿ ಭೀಮಣ್ಣ ನಾಯ್ಕ ಸೈಕಲ್ ಜಾಥಾ ನಡೆಸಿದರು. ಒಂದು ತಾಸಿನ ಅವಧಿಯಲ್ಲಿ 5 ಕಿಮೀ ಸೈಕಲ್ ಸವಾರಿ ನಡೆಸಿದರು. ವಿಕಾಸ ಆಶ್ರಮ ಮೈದಾನದಲ್ಲಿ ಜನರಿಗೆ ಕೈ ಬೀಸಿ ಸೈಕಲ್ ಏರಿದ ಅವರು ಇಡೀ ನಗರ ಸಂಚಾರ ನಡೆಸಿ ಮರಳಿ ಅದೇ ಸ್ಥಾನ ತಲುಪಿದರು. ನಡುವೆ ಗಾಂಧೀಜಿ ಹಾಗೂ ಶಿವಾಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಅಶ್ವಿನಿ ಸರ್ಕಲ್, ಯಲ್ಲಾಪುರ ನಾಕಾ, ಮಾರಿಕಾಂಬಾ ಸ್ಟೆಡಿಯಂ, ಕೆ ಎಸ್ ಆರ್ ಟಿ ಸಿ ಡಿಪೋ, ಕೋಟಿಗೆರೆ ಸರ್ಕಲ್, ಶಿವಾಜಿ ಚೌಕ, ಬಸ್ ನಿಲ್ದಾಣ, ಬಾರ್ಕೂರು ಚೌಕ, ದೇವಿಕೆರೆ, ಕೋರ್ಟ ರಸ್ತೆ, ರಾಘವೇಂದ್ರ ಮಠ ಮೊದಲಾದ ಭಾಗದಲ್ಲಿ ಶಾಸಕರ ಜೊತೆ ಇನ್ನಿತರರು ಸೈಕಲ್ ಹಾಗೂ ಬೈಕ್ ಮೂಲಕ ಮೆರವಣಿಗೆ ಮಾಡಿದರು.
ತಾಲೂಕಾಡಳಿತದ ವಿವಿಧ ಅಧಿಕಾರಿಗಳು ಸಹ ಈ ಜಾಥಾದಲ್ಲಿದ್ದರು. ಸೈಕಲ್ ಮುಂಭಾಗ ತಿರಂಗ ಧ್ವಜ ಕಟ್ಟಿ ದೇಶಪ್ರೇಮ ಜಾಗೃತಿಯ ಸಂದೇಶ ಸಾರಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೈಕಲ್ ಜಾಥಾ ನಡೆಸಿದ ವಿಡಿಯೋ ಇಲ್ಲಿ ನೋಡಿ..








