6

Agriculture news | ನಮಸ್ಕಾರ.. ಕೃಷಿ ವಾರ್ತೆಗೆ ಸ್ವಾಗತ!

ಶಿರಸಿ ಮೂಲದ ಹಿರಿಯ ಪತ್ರಕರ್ತ ಡಾ ವೆಂಕಟ್ರಮಣ ಹೆಗಡೆ ತಮ್ಮ ಒಡೆತನದ `ಫಾರ್ಮ ಟಿವಿ’ಯಲ್ಲಿ `ಕೃಷಿ ವಾರ್ತೆ’ (Agriculture news) ಶುರು ಮಾಡಿದ್ದಾರೆ.

ಈಗಾಗಲೇ ಫಾರ್ಮ ಟಿವಿಯಿಂದ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ `ನೇರ ಪ್ರವಾರ’ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು `ಶ್ರಮಜೀವಿ’ ಪತ್ರಿಕೆಯನ್ನು ಈ ಸಂಸ್ಥೆ ಹೊರತರುತ್ತಿದೆ. ಕೃಷಿ ವಿಷಯವಾಗಿ ಹಲವು ಸಾಕ್ಷ್ಯಚಿತ್ರಗಳನ್ನು ಸಹ ಈ ವಾಹನಿ ಪ್ರಸಾರ ಮಾಡಿದೆ. ಈಚೆಗೆ ಆರೋಗ್ಯ ವಿಷಯಕ್ಕೆ ಸಂಬoಧಿಸಿ ಸಹ ಈ ಸಂಸ್ಥೆ ವಿವಿಧ ಕಾರ್ಯಕ್ರಮಗಳ ರೂಪ-ರೇಷೆಗಳನ್ನು ಸಿದ್ದಪಡಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಿದೆ.

ಈ ಎಲ್ಲದರ ನಡುವೆ `ಒಟ್ಟಿಗೆ ಬೆಳೆಯೋಣ’ ಎನ್ನುತ್ತ ಕೃಷಿಗೆ ಮಾತ್ರ ಸೀಮಿತವಾಗಿ ವಾರ್ತೆಗಳನ್ನು ಪ್ರಸಾರ ಮಾಡುವ ಮೂಲಕ ಹೊಸ ಸಾಹಸಕ್ಕೆ ಫಾರ್ಮ ಟಿವಿ ಮುಂದಾಗಿದೆ. ಮಂಗಳವಾರ ರಾತ್ರಿ ಹಲವು ಮಹತ್ವದ ಮಾಹಿತಿಗಳೊಂದಿಗೆ ಕೃಷಿ ವಾರ್ತೆಯ ಮೊದಲ ಸಂಚಿಕೆ ಪ್ರಸಾರವಾಯಿತು.

ಫಾರ್ಮ ಟಿವಿ ಶುರು ಮಾಡಿದ ಕೃಷಿ ವಾರ್ತೆಯ ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page