ಮುಂಡಗೋಡ: ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ ಬೆಳ್ಳಿ ತಡಕಾಡುತ್ತಿರುವಾಗ ಮನೆ ಮಾಲಕನ ಆಗಮನವಾಗಿದೆ. ಕದ್ದ ವಸ್ತು ತುಂಬಿದ ಬ್ಯಾಗ್ ಬಿಟ್ಟು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ!
ಅನ್ನಪೂರ್ಣೆಶ್ವರಿ ನಗರದಲ್ಲಿ ಮನೆ ಹೊಂದಿರುವ ಮಾರುತಿ ಕುರಿ ಶುಕ್ರವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಹೊರ ಹೋಗಿದ್ದರು. ರಾತ್ರಿ ಮನೆಗೆ ಮರಳುವ ವೇಳೆಗೆ ಕಳ್ಳರು ಆ ಮನೆ ಪ್ರವೇಶಿಸಿದ್ದರು. ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಕಪಾಟಿನ ಬಾಗಿಲು ಒಡೆದಿದ್ದರು. ಅಲ್ಲಿದ್ದ ಬೆಳ್ಳಿ-ಬಂಗಾರವನ್ನು ಬ್ಯಾಗಿನಲ್ಲಿ ತುಂಬಿಕೊAಡಿದ್ದರು. ಆ ಮನೆಯಿಂದ ಹೊರ ಬೀಳುವ ವೇಳೆ ಮಾರುತಿ ಅವರು ಮನೆಗೆ ಬಂದು ತಲುಪಿದ್ದಾರೆ.
ಮನೆ ಮಾಲಕನನ್ನು ನೋಡಿದ ಕಳ್ಳರು ಕಕ್ಕಾಬಿಕ್ಕಿಯಾಗಿದ್ದು ಬ್ಯಾಗುಸಹಿತ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ, ಮಾರುತಿ ಅವರು ಬ್ಯಾಗನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಅದನ್ನು ಬಿಟ್ಟು ಕಳ್ಳರು ಓಡಿದರು. ಈ ವೇಳೆ ಒಬ್ಬ ಕಳ್ಳನ ಕೈಯನ್ನು ಮಾರುತಿ ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆತ ಸಹ ತನ್ನನ್ನು ಬಿಡುವಂತೆ ಕಾಡುತ್ತಿದ್ದ. ಕೊನೆಗೂ ಆತ ಮಾರುತಿ ಅವರಿಂದ ತಪ್ಪಿಸಿಕೊಂಡು ಪರಾರಿಯಾದ.
ಕಾರಿನಲ್ಲಿ ಬಂದ ನಾಲ್ವರು ಕಳ್ಳರು ಅದೇ ಕಾರಿನಲ್ಲಿ ಪರಾರಿಯಾಗಿದನ್ನು ಮಾರುತಿ ಅವರು ನೋಡಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮುಂಡಗೋಡ ಪಿಎಸ್‌ಐ ಪರಶುರಾಮ ಮಿರ್ಚಗಿ ತಮ್ಮ ತಂಡದೊAದಿಗೆ ಕಾರು ಹಿಂಬಾಲಿಸಿದಾದರೂ ಕಳ್ಳರು ಸಿಗಲಿಲ್ಲ. ಇದೀಗ ಮಾರುತಿ ಅವರು ಮನೆಯಿಂದ ಕಳ್ಳತನವಾದ ವಸ್ತುಗಳ ಪಟ್ಟಿ ಮಾಡುತ್ತಿದ್ದಾರೆ. ಬ್ಯಾಗಿನಲ್ಲಿದ್ದ ಸಾಮಗ್ರಿ ಹೊರತುಪಡಿಸಿ ಉಳಿದವುಗಳ ಹುಡುಕಾಟ ನಡೆದಿದೆ.