ಶಿರಸಿ: `ಬಿಜೆಪಿ ಎಂದರೆ ಬಕಾಸುರ ಪಕ್ಷ’ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಎಚ್ ಡಿ ಕುಮಾರಸ್ವಾಮಿ ಈ ಹಿಂದೆ ಬಿಜೆಪಿಗರಿಂದ ದೂರವಿದ್ದರು. ಇದೀಗ ಬಿಜೆಪಿ ಜೊತೆ ಕೈ ಜೋಡಿಸಿದ್ದು, ಜೆಡಿಎಸ್ ಪಕ್ಷವನ್ನು ಬಿಜೆಪಿ ನಿರ್ನಾಮ ಮಾಡಲಿದೆ’ ಎಂದರು. `ಯಡಿಯೂರಪ್ಪ ಹಾಗೂ ಅವರ ಮಕ್ಕಳನ್ನು ಜರಿದಿದ್ದ ಎಚ್ ಡಿ ಕುಮಾರಸ್ವಾಮಿ ಈಗ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಟಿಕೆಟ್ ಪಡೆಯಲು ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದಾರೆ. ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ತತ್ವ, ಸಿದ್ಧಾಂತಗಳೇ ಇಲ್ಲ’ ಎಂದು ಕಿಡಿಕಾರಿದರು.
`ಮುಡಾ ಪ್ರಕರಣಕ್ಕೆ ಸಂಬoಧಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದಯಾತ್ರೆ ನಡೆಸಿದರು. ಆದರೆ, ಇದೀಗ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಅವರ ಪಕ್ಷದವರೇ ಯತ್ನಿಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಪ್ರತಾಪ ಸಿಂಹ ನೇತೃತ್ವದಲ್ಲಿ ವಿಜಯೇಂದ್ರರನ್ನು ಕೆಳಗಿಳಿಸುವ ತಯಾರಿ ನಡೆಸಿದ್ದಾರೆ’ ಎಂದರು.
ಶಿಕ್ಷಕರ ನೇಮಕಾತಿ ಸೇರಿ ಇನ್ನಿತರ ವಿಷಯಗಳ ಬಗ್ಗೆ ಮಧು ಬಂಗಾರಪ್ಪ ಏನು ಹೇಳಿದರು? ವಿಡಿಯೋ ಇಲ್ಲಿ ನೋಡಿ..



