ಕುಮಟಾ: ಶಿರಸಿ ರಾಮನಬೈಲಿನ ವೆಂಕಟ್ರಮಣ ನಾಯ್ಕ ಅವರು ಓಡಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ 4.30ಕ್ಕೆ ವೆಂಕಟ್ರಮಣ ಜಟ್ಟಿ ನಾಯ್ಕ ಅವರು ತಮ್ಮ ಕುಟುಂಬದವರ ಜೊತೆ ಕುಮಟಾದಿಂದ ಶಿರಸಿ ಕಡೆ ಹೊರಟಿದ್ದರು. ಅವರು ಓಡಿಸುತ್ತಿದ್ದ ಕಾರಿಗೆ ಬೆಂಗಳೂರಿನ ಪ್ರಮೋದಕುಮಾರ ನಾಯ್ಕ (24) ಎಂಬಾತರು ಬೈಕ್ ಗುದ್ದಿದರು. ಕುಮಟಾದ ಶಿಳ್ಳೆ ಕ್ರಾಸಿನ ಬಳಿ ಈ ಅಪಘಾತ ನಡೆದಿದ್ದು, ಪ್ರಮೋದಕುಮಾರ ಅವರ ಜೊತೆ ಬೈಕಿನ ಹಿಂಬದಿ ಸವಾರರಾಗಿದ್ದ ರಾಯಚೂರಿನ ಸಂತೋಷ ರಂಗಪ್ಪ ಚಲವಾದಿ ಸಹ ಗಾಯಗೊಂಡರು.
ಪ್ರಮೋದಕುಮಾರ ನಾಯ್ಕ ಚಿಮಣಿ ದುರಸ್ಥಿ ಕೆಲಸ ಮಾಡುವವರಾಗಿದ್ದು, ಸಂತೋಷ ಚಲವಾದಿ ಶಾಮಿಯಾನ ಅಳವಡಿಸುವ ಸಿಬ್ಬಂದಿಯಾಗಿದ್ದಾರೆ. ಈ ಇಬ್ಬರ ಕಾಲುಗಳಿಗೂ ಭಾರೀ ಪ್ರಮಾಣದ ಗಾಯವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. `ಬೈಕ್ ಸವಾರ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣ. ಇದರಿಂದ ಎರಡೂ ವಾಹನ ಜಖಂ ಆಗಿದೆ’ ಎಂದು ವೆಂಕಟ್ರಮಣ ನಾಯ್ಕ ಕುಮಟಾ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ.