ಶಿರಸಿ: ಬನವಾಸಿ ಬಳಿಯ ಕೊರ್ಲಗಟ್ಟಾದಲ್ಲಿ ಗೋಬಿ ಮಂಜೂರಿ ಅಂಗಡಿ ನಡೆಸುತ್ತಿದ್ದ ಕುಬೇರ ಗಣಪತಿ ನಾಯ್ಕ ಅವರ ಅಂಗಡಿಯಲ್ಲಿ ಕಳ್ಳತನವಾಗಿದೆ.
ಕುಬೇರ ನಾಯ್ಕ ಅವರು ಮರಗುಂಡಿಗೆಯವರು. ಬನವಾಸಿ ಬಳಿಯ ಕೊರ್ಲಗಟ್ಟಾದಲ್ಲಿ ಎಗ್ ರೈಸ್, ಗೋಬಿ ಸೇರಿ ವಿವಿಧ ಆಹಾರ ನೀಡುವ ಮಳಿಗೆಯನ್ನು ಅವರು ನಡೆಸುತ್ತಾರೆ. ನವೆಂಬರ್ 1ರಂದು ರಾತ್ರಿ 11.30ಕ್ಕೆ ಅವರು ತಮ್ಮ ಮಳಿಗೆಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ 9.30ಕ್ಕೆ ಮಳಿಗೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಅಂಗಡಿ ಹಿಂದಿನ ಬಾತ್ ರೂಂ ಶೀಟ್ ಒಡೆದು ಒಳಗೆ ನುಗ್ಗಿದ ಕಳ್ಳರು ಲಕ್ಷ್ಮೀ ಪೂಜೆಗಾಗಿ ದೇವರ ಮುಂದಿರಿಸಿದ್ದ 3 ಸಾವಿರ ರೂ ಹಣ ಕದ್ದಿದ್ದಾರೆ. ಇದರೊಂದಿಗೆ ಮಳಿಗೆಯ ಡ್ರಾವರಿನಲ್ಲಿದ್ದ 8300ರೂ ಹಣವನ್ನು ಸಹ ಅಪಹರಿಸಿದ್ದಾರೆ. `ಕಳ್ಳರನ್ನು ಹುಡುಕಿ ತಮ್ಮ 11300ರೂ ಹಣವನ್ನು ಮರಳಿಸಿ’ ಎಂದು ಕುಬೇರ ನಾಯ್ಕ ಅವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
#S News Digitel Advertisement: ಮನೆ ಮನೆಗೂ ಅಗತ್ಯ ಸಿಸಿ ಕ್ಯಾಮರಾ. ಸಿಸಿ ಕ್ಯಾಮರಾ ಸೇವೆಗೆ ಇಲ್ಲಿ ಫೋನ್ ಮಾಡಿ: ಟೆಕ್ ಬೈಟ್ ಐಟಿ ಸೆಲ್ಯುಶನ್ ಎಜನ್ಸಿ: 8431314190