ಹೊನ್ನಾವರ: ಹೊನ್ನಾವರದ ವರ‍್ನಕೇರಿ ಕ್ರಾಸಿನ ಬಳಿ ಬೈಕಿಗೆ ಜೀಪು ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ಪೆಟ್ಟಾಗಿದೆ.
ಶುಕ್ರವಾರ ಮಧ್ಯಾಹ್ನ ಮಾಗೋಡು ಹೊಸಗದ್ದೆಯ ಶಿಲ್ಪಿ ಕೆಲಸಗಾರ ಪ್ರಜ್ವಲ ಪ್ರಕಾಶ ನಾಯ್ಕ (26) ಬೈಕಿನಲ್ಲಿ ಹೋಗುತ್ತಿದ್ದರು. ಕಾಯ್ಕಿಣಿ ಗೌಡರ ಗದ್ದೆಯ ಮಂಜುನಾಥ ರಂಗ ನಾಯ್ಕ (19) ಹಿಂದೆ ಕೂತಿದ್ದರು.
ಆಗ ಹೊನ್ನಾವರದಿಂದ ಗೇರುಸೊಪ್ಪ ಕಡೆ ಬುಲೇರೋ ಓಡಿಸಿಕೊಂಡು ಬಂದ ಚಂದ್ರು ಮಾರುತಿ ಗೌಡ ರ‍್ನಕೇರಿ ಕ್ರಾಸಿನ ಬೈಕಿಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.



