ಕಾರವಾರ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಮೈಕ್ ಹಿಡಿದು ಕನ್ನಡ ಗೀತೆಗಳನ್ನು ಹಾಡಿದರು. ಅವರ ಹಾಡಿಗೆ ಅಲ್ಲಿ ನೆರೆದಿದ್ದ ಅನೇಕರು ಕುಣಿದು ಕುಪ್ಪಳಿಸಿದರು.
ಕಾರವಾರದ ಸಾಯಿ ಮಂದಿರ ರಸ್ತೆಯ ದೈವಜ್ಞ ಮಂಟಪದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ 8ನೇ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿತ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಮುಖ್ಯ ಅತಿಥಿಯಾಗಿದ್ದರು. ವೇದಿಕೆ ಏರಿದ ಎಂ ನಾರಾಯಣ ಅವರು ಮೈಕು ಹಿಡಿದು ಕನ್ನಡ ಗಾಯನಗಳನ್ನು ಪ್ರಸ್ತುತಪಡಿಸಿದರು. `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂದು ಅವರು ಹಾಡುವಾಗ ನೆರೆದಿದ್ದವರು ಕನ್ನಡ ಭಾವುಟ ಹಿಡಿದು ನೃತ್ಯ ಮಾಡಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ, ಪ್ರಮುಖರಾದ ಕೆ ಡಿ ಪೆಡ್ನೇಕರ್, ಬಾಬು ಶೇಖ್, ರಾಜೇಂದ್ರ ಅಂಚೆಕರ್, ಶಿವಾನಂದ ನಾಯಕ, ರಾಮು ನಾಯ್ಕ ಇತರರು ಗಾನಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ಪೊಲೀಸ್ ಅಧೀಕ್ಷಕರ ಗಾಯನ ಹಾಗೂ ಇತರೆ ಗಣ್ಯರ ನೃತ್ಯದ ವಿಡಿಯೋ ಇಲ್ಲಿ ನೋಡಿ..