ಯಲ್ಲಾಪುರ: ಜನರ ಪ್ರಮುಖ ದಾಖಲೆಗಳಲ್ಲಿ ಒಂದಾದ ಪಡಿತರ ಚೀಟಿಗಳನ್ನು ಸರ್ಕಾರ ದಿಢೀರ್ ಆಗಿ ರದ್ದು ಮಾಡುತ್ತಿರುವುದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ.
`ಬಡವರು ಹಾಗೂ ಮಧ್ಯಮ ವರ್ಗದವರಿಗೆ ವಿವಿಧ ಕಾರಣಗಳಿಂದ ಪಡಿತರ ಚೀಟಿ ಅಗತ್ಯವಿದೆ. ವಿವಿಧ ಸರ್ಕಾರಿ ಸೌಲಭ್ಯ ಪಡೆಯುವುದಕ್ಕೆ ಸಹ ಪಡಿತರ ಚೀಟಿ ಕೇಳುತ್ತಿದ್ದು, ಪಡಿತರ ಚೀಟಿ ರದ್ಧತಿಯಿಂದ ಜನ ಸಾಮಾನ್ಯರು ಸಮಸ್ಯೆ ಅನುಭವಿಸಲಿದ್ದಾರೆ’ ಎಂದವರು ಅಭಿಪ್ರಾಯಪಟ್ಟರು.
`ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೇರಿ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಪಡಿತರ ಚೀಟಿ ಅಗತ್ಯ. ಆಯುಷ್ಮಾನ ಭಾರತದಂಥಹ ಆರೋಗ್ಯ ಸವಲತ್ತು, ಉಚಿತ ಶಿಕ್ಷಣ, ಉಜ್ವಲ ಗ್ಯಾಸ್, ವಸತಿ ನಿವೇಶನ ಮೊದಲಾದ ಸೌಲಭ್ಯಗಳಿಗೆ ರೇಶನ್ ಕಾರ್ಡ ಬೇಕು. ಏಕಾಏಕಿ ಪಡಿತರ ಚೀಟಿ ರದ್ದು ಮಾಡುವ ಮೊದಲು ಈ ಎಲ್ಲದರ ಬಗ್ಗೆ ಸರ್ಕಾರ ಚಿಂತಿಸಬೇಕು’ ಎಂದು ರಾಮು ನಾಯ್ಕ ಒತ್ತಾಯಿಸಿದ್ದಾರೆ.