ಶಿರಸಿ: ರಸ್ತೆ ಮೇಲಿನ ಕಾಲುವೆ ದಾಟಿಸುವ ವೇಳೆ ಬೈಕ್ ಬಿದ್ದ ಪರಿಣಾಮ ಬೈಕಿನ ಹಿಂಬದಿ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಂಗಾಪುದರಿoದ ದಾಸನಕೊಪ್ಪ ಕಡೆ ಬೈಕ್ ಓಡಿಸಿಕೊಂಡು ಬಂದ ಕೃಷ್ಣ ಪುಟ್ಟ ವಾಲ್ಮಿಕಿ (48) ಬೈಕಿನಿಂದ ಬಿದ್ದಿದ್ದಾರೆ. ಆ ಬೈಕಿನಲ್ಲಿ ಹಿಂದೆ ಕೂತಿದ್ದ ಮಣಿಕಂಠ ಕೃಷ್ಣ ವಾಲ್ಮಿಕಿ ಮೈಮೇಲೆ ಬೈಕ್ ಬಿದ್ದಿದೆ. ಪರಿಣಾಮ ಮಣಿಕಂಠ ಕೃಷ್ಣ ವಾಲ್ಮಿಕಿ ಗಾಯಗೊಂಡಿದ್ದಾರೆ. ಈ ವೇಳೆ ಕೃಷ್ಣ ವಾಲ್ಮಿಕಿ ಅವರಿಗೂ ಅಲ್ಲಲ್ಲಿ ಪೆಟ್ಟಾಗಿದೆ. ಮಣಿಕಂಠರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು.
ಗಾಯಗೊಂಡ ಇಬ್ಬರು ಬನವಾಸಿಯ ರಂಗಾಪುರದವರು. ರಂಗಾಪುರದಿoದ ಹಾವೇರಿ ಕಡೆ ಅವರು ಬೈಕಿನಲ್ಲಿ ಹೋಗುತ್ತಿದ್ದರು. ರಂಗಾಪುರದಿoದ ದಾಸನಕೊಪ್ಪದ ಕಡೆ ಬರುತ್ತಿದ್ದ ಬಸವರಾಜ ಶಿಳ್ಳೇರ್ ಈ ಅಪಘಾತ ನೋಡಿದ್ದು, ಗಾಯಗೊಂಡವರ ಮನೆಯವರಿಗೆ ವಿಷಯ ಮುಟ್ಟಿಸಿದರು. ಅದಾದ ನಂತರ ಪೊಲೀಸ್ ದೂರು ದಾಖಲಿಸಿದರು.



