6

ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!

ಶಿರಸಿ: ಕಾಣೆಯಾದ ಮೊಬೈಲ್ ಫೋನ್’ನ್ನು ಶಿರಸಿ ಪೊಲೀಸರು 15 ನಿಮಿಷದಲ್ಲಿ ಹುಡುಕಿ ವಾರಸುದಾರರಿಗೆ ನೀಡಿದ್ದಾರೆ.

ಗೋಣುರಿನ ಸ್ವಾತಿ ಜೀನದತ್ತ ಜೈನ್ ಅವರು ಬುಧವಾರ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಮೊಬೈಲ್ ಕಾಣೆಯಾದ ಬಗ್ಗೆ ಅವರು ಪೊಲೀಸ್ ಠಾಣೆಗೆ ಹೋಗಿ ಹೇಳಿದರು. ತಕ್ಷಣ ತಮ್ಮ ಲ್ಯಾಪ್‌ಟಾಪ್ ಆನ್ ಮಾಡಿದ ಪೊಲೀಸರು ಜಿಪಿಎಸ್ ಆಧಾರಿತ ಹುಡುಕಾಟ ನಡೆಸಿದರು.

ಶಿರಸಿ ನಗರ ಠಾಣಾ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಮೊಬೈಲ್ ಲೊಕೇಶನ್ ಕಾಣಿಸಿದ್ದು, ಪೊಲೀಸ್ ಸಿಬ್ಬಂದಿ ಅಲ್ಲಿ ಹೋಗಿ ಹುಡುಕಾಟ ನಡೆಸಿದರು. ಆಗ ಜನ ಜಂಗುಳಿಯಲ್ಲಿ ಬಿದ್ದ ಮೊಬೈಲ್ ಸಿಕ್ಕಿತು. ಅದನ್ನು ಠಾಣೆಗೆ ತಂದ ಪೊಲಿಸರು ಅಲ್ಲಿ ಕಾಯುತ್ತಿದ್ದ ಸ್ವಾತಿ ಜೈನ್ ಅವರಿಗೆ ಮರಳಿಸಿದರು.

ಪೊಲೀಸರ ನಡೆ ಶ್ಲಾಘಿಸಿ ಮೊಬೈಲ್ ಸಿಕ್ಕ ಖುಷಿಯನ್ನು ಸ್ವಾತಿ ಜೈನ್ ಹಂಚಿಕೊ0ಡ ವಿಡಿಯೋ ಇಲ್ಲಿ ನೋಡಿ..

  • Related Posts

    ಬೇಡ್ತಿ–ವರದಾ ಯೋಜನೆಗೆ ಹೊಸ ತಿರುವು?

    Share this… Facebook Pinterest Twitter Linkedin Whatsappಬೇಡ್ತಿ–ವರದಾ ನದಿ ಜೋಡಣೆ: ಸ್ವರ್ಣವಲ್ಲಿಶ್ರೀಗಳೊಂದಿಗೆ ವಿಶೇಷ ಸಭೆ, ಹಾವೇರಿ ರೈತ ಸಂಘದಿಂದ ಧನ್ಯವಾದ ಹಾವೇರಿ: ಬೇಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ, ಹಾವೇರಿಯಿಂದ 15ಕ್ಕೂ ಹೆಚ್ಚು…

    ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಸಭೆ ರದ್ದು !!

    Share this… Facebook Pinterest Twitter Linkedin Whatsappಹಾವೇರಿ: ಇಂದು ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ರದ್ದು; ರೈತರು ಸಭೆಗೆ ಬರುವುದು ಬೇಡ – ರೈತ ಸಂಘದ ಮನವಿ ಕರ‍್ಖಾನೆ ಮಾಲೀಕರು ಸಭೆಗೆ ಗೈರಾಗುವ ಮಾಹಿತಿ ಹಿನ್ನೆಲೆ; ರೈತ ಸಂಘದ ರಾಜ್ಯಾಧ್ಯಕ್ಷ…

    You cannot copy content of this page