ಮುಂಡಗೋಡದ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೀತ-ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಂಗನಬಾಹು ದೃಢವಾಗಿದೆ. ಮಂಗನ ಕಾಯಿಲೆ ರೀತಿ ಮಾರಣಾಂತಿಕವಲ್ಲ. ಮಂಗನಬಾಹು ವಾರಗಳ ಕಾಲ ಕಾಡುವ ರೋಗವಾಗಿದ್ದು, ಕೊರೊನಾ ಮಾದರಿಯಲ್ಲಿಯೇ ವೈರಸ್ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಜ್ವರ-ನೆಗಡಿ ಲಕ್ಷಣಗಳಿರುವ ವ್ಯಕ್ತಿಯ ಸಾಮೀಪ್ಯ, ಹಸ್ತ ಲಾಘವದಿಂದಲೂ ರೋಗ ವ್ಯಾಪಿಸುತ್ತದೆ. ಸಾಮಾನ್ಯವಾಗಿ ಹಾಸ್ಟೇಲ್’ಗಳಲ್ಲಿ ಒಬ್ಬರ ಬಟ್ಟೆ ಇನ್ನೊಬ್ಬರು ಧರಿಸುವುದು, ಅತ್ಯಂತ ಸಾಮೀಪ್ಯದ ಒಡನಾಟಗಳಿರುವುದರಿಂದ ರೋಗದ ಪ್ರಮಾಣ ಹೆಚ್ಚಿಗೆ ಕಾಣಿಸುತ್ತದೆ. ಪ್ರಸ್ತುತ ಮುಂಡಗೋಡ ವಸತಿ ನಿಲಯದಲ್ಲಿಯೂ 205 ಮಕ್ಕಳಿದ್ದು, 50ಕ್ಕೂ ಅಧಿಕ ಮಕ್ಕಳು ಗಂಟಲು, ಕಿವಿ, ಬಾಯಿ ಉಬ್ಬಿದ್ದ ನೋವಿನಿಂದ ಬಳಲುತ್ತಿದ್ದಾರೆ. ಜ್ವರ ಬರುವುದು ಈ ರೋಗದ ಮೊದಲ ಲಕ್ಷಣ. ನೆಗಡಿ, ಕೆಮ್ಮುವಿನ ಜೊತೆ ಬಾಯಿ, ಕಿವಿ ಅಥವಾ ಗಂಟಲಿನ ಗೃಂಥಿಗಳು ಉಬ್ಬುತ್ತವೆ. ಇದರ ನೋವನ್ನು ಮಕ್ಕಳು ಸಹಿಸಿಕೊಳ್ಳಲಾಗದೇ ನರಳುತ್ತಾರೆ.
ಈ ವಸತಿ ಶಾಲೆಯಲ್ಲಿ 205 ವಿದ್ಯಾರ್ಥಿಗಳಿದ್ದು, ಅದರಲ್ಲಿ ಮೊದಲ ಹಂತದಲ್ಲಿ 25 ಮಂದಿಗೆ ಮಂಗನಬಾವು ಕಾಣಿಸಿಕೊಂಡಿತ್ತು. ಅವರನ್ನು ತಪಾಸಣೆಗೆ ಒಳಪಡಿಸಿ ಮನೆಗೆ ಕಳುಹಿಸಲಾಗಿತ್ತು. ಅದಾದ ನಂತರ ಇದೀಗ ಇನ್ನಷ್ಟು ವಿದ್ಯಾರ್ಥಿಗಳಿಗೆ ರೋಗ ಹರಡಿದೆ. ಜ್ವರ-ನೆಗಡಿ ಕಾಣಿಸಿಕೊಂಡ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸುವುದು ರೊಗ ಹರಡುವಿಕೆ ತಡೆಯ ಮೊದಲ ಉಪಾಯ. ಹೀಗಾಗಿ ಮೊದಲ ಹಂತದಲ್ಲಿ ರೋಗ ಕಾಣಿಸಿಕೊಂಡ 25 ಜನರನ್ನು ಮನೆಗೆ ಕಳುಹಿಸಲಾಗಿತ್ತು. ಅದಾಗಿಯೂ ಅಲ್ಲಿ ಉಳಿದ್ದ ಇಬ್ಬರ ಮೂಲಕ ಇತರರಿಗೆ ರೋಗ ಹಬ್ಬಿಕೊಂಡಿದೆ.
ಈ ರೋಗ ಮಾರಣಾಂತಿಕವಲ್ಲ
ಮ0ಗನ ಕಾಯಿಲೆ ಹಾಗೂ ಮಂಗನಬಾಹು ಎರಡು ಬೇರೆ ಬೇರೆ ರೋಗಗಳು. ಮಂಗನಕಾಯಿಲೆ ಮಾರಣಾಂತಿಕ. ಮ0ಗನಲ್ಲಿರುವ ಉಣ್ಣೆಗಳ ಮೂಲಕ ಮಂಗನ ಕಾಯಿಲೆ ಮನುಷ್ಯರಿಗೆ ಹರಡುತ್ತದೆ. ಸೊಪ್ಪು ತರುವಿಕೆ, ಅರಣ್ಯ ಉತ್ಪನ್ನ ಸಂಗ್ರಹ, ಜಾನುವಾರುಗಳನ್ನು ಕಾಡಿಗೆ ಮೇವಿಗೆ ಬಿಟ್ಟಾಗ ಈ ರೋಗ ಬರುವ ಸಾಧ್ಯತೆ ಹೆಚ್ಚು. ಮಂಗನ ಕಾಯಿಲೆ ಬಂದರೆ ಬಹು ಅಂಗಾAಗ ವೈಫಲ್ಯದಿಂದ ರೋಗಿ ಸಾವನಪ್ಪುತ್ತಾರೆ. ಆದರೆ, ಮಂಗನಬಾಹುವಿಗೆ ಈ ಆತಂಕವಿಲ್ಲ.
ರೋಗದ ವಿರುದ್ಧ ಭಯ ಬೇಡ.. ಎಚ್ಚರವಿರಲಿ!