6 Skip to content

ದರ್ಶನ್ ಅಭಿಮಾನಿಯ ಶವ ಪರೀಕ್ಷೆ: ವರದಿ ಬಹಿರಂಗ

ಬೆಂಗಳೂರು: ನಟ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ. ಆತ ತೀವ್ರ ಆಘಾತ ರಕ್ತಸ್ರಾವದಿಂದ ಸಾವನಪ್ಪಿರುವುದಾಗಿ ವರದಿಯಲ್ಲಿದೆ.
ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂಬ ಆರೋಪವಿದ್ದು, ಇದೇ ಪ್ರರಕಣದ ಅಡಿ ದರ್ಶನ್ ಸೇರಿ ಈವರೆಗೆ 16 ಜನರ ಬಂಧನವಾಗಿದೆ.
ಶವಪರೀಕ್ಷೆಯಲ್ಲಿ ರೇಣುಕಾ ಸ್ವಾಮಿ ಅವರ ದೇಹದ ಮೇಲೆ 15 ಗಾಯಗಳು ಕಂಡುಬAದಿವೆ ಎಂದು ಹೇಳಿದ್ದು, ರೇಣುಕಾ ಸ್ವಾಮಿ ಅವರ ದೇಹದ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ.
ರೇಣುಕಾಸ್ವಾಮಿ ಮೈ ಮೇಲೆ ಇರುವ ಗಾಯದ ಗುರುತುಗಳು ಮರದ ಕೋಲು, ಚರ್ಮದ ಬೆಲ್ಟ್ ಹಾಗೂ ಹಗ್ಗದಿಂದ ಹೊಡೆದ ಗುರುತುಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Leave a comment

Leave a Reply

You cannot copy content of this page