ಮುಂಡಗೋಡ: ಕೇರಳದ ವಿ ಎಂ ವರ್ಗೀಸ್ ಮುಲ್ಲಾ ಅವರು ಮೈನಳ್ಳಿಯಲ್ಲಿ ಭೂಮಿ ಹೊಂದಿದ್ದು, ಕೆಲವರು ಅವರಿಗೆ ಜಮೀನಿಗೆ ಹೋಗಲು ಬಿಡುತ್ತಿಲ್ಲ!
ವರ್ಗೀಸ್ ಮುಲ್ಲಾ ಅವರು ಮೈನಳ್ಳಿ ಗ್ರಾಮದ ಸರ್ವೆ ನಂ 22ರ ಪ್ಲಾಟ್ ನಂ 115ರಲ್ಲಿ 4.33 ಎಕರೆ ಭೂಮಿ ಹೊಂದಿದ್ದಾರೆ. ನ 18ರಂದು ಅವರು ಅಲ್ಲಿ ತೆರಳಲು ಉದ್ದೇಶಿಸಿದಾಗ ಅದೇ ಊರಿನನ ಶರೀಪಸಾಬ ಕಟ್ಟಿ, ಮುಕ್ತಿಯಾರ್ ಕಟ್ಟಿ, ಸಲೀಂ ಕಟ್ಟಿ, ಮೋಹನ್ ಕರುಣಾಕರನ್ ಹಾಗೂ ಅಭಿಷೇಕ ಕರುಣಾಕರನ್ ಅಡ್ಡಗಟ್ಟಿದ್ದರು. `ಈ ಭೂಮಿಯನ್ನು ನಾವು ಗೇಣಿಗೆ ಪಡೆದಿದ್ದು, ನೀವು ಬರುವುದು ಸರಿಯಲ್ಲ’ ಎಂದು ಆ ಐದು ಜನ ವಾದಿಸಿದರು.
ಜೊತೆಗೆ ಆ ಜಮೀನಿನ ಒಳಗೆ ಪ್ರವೇಶಿಸಿ, `ಈ ಭೂಮಿ ನಿಮ್ಮದಲ್ಲ’ ಎಂದು ವರ್ಗೀಸ್ ಅವರಿಗೆ ಕೇಳುವಂತೆ ಕೂಗಿದರು. `ಈ ಐವರು ಸೇರಿ ಕೆಟ್ಟದಾಗಿ ನಿಂದಿಸಿದಲ್ಲದೇ, ತಮ್ಮ ಭೂಮಿಗೆ ತಮಗೆ ಹೋಗಲು ಅವಕಾಶ ಕೊಡುತ್ತಿಲ್ಲ’ ಎಂದು ವಿ ಎಂ ವರ್ಗೀಸ್ ಮುಲ್ಲಾ ಪೊಲೀಸ್ ದೂರು ನೀಡಿದ್ದಾರೆ.



