ಅಂಕೋಲಾ: ಬೈಕಿಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ಅವರಿಗೆ ಕಾರು ಗುದ್ದಿದೆ. ಪರಿಣಾಮ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ.
ಅಂಕೋಲಾದ ಮರಾಠಾಕೇರಿಯಲ್ಲಿ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಪಟಗಾರ ಹಾಗೂ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ವಾಸವಾಗಿದ್ದರು. ನ 26ರಂದು ಮಹೇಶ ಅವರು ತಮ್ಮ ಬೈಕಿಗೆ ಪೆಟ್ರೋಲ್ ತುಂಬಿಸಲು ಕಾರವಾರ-ಅಂಕೋಲಾ ರಸ್ತೆಯ ಪ್ರಭು ಪೆಟ್ರೋಲ್ ಬಂಕಿನ ಕಡೆ ಹೋಗುತ್ತಿದ್ದರು. ಈ ವೇಳೆ ಅಂಚೆ ಕಚೇರಿ ಕಡೆಯಿಂದ ಜೈ ಹಿಂದ್ ಸರ್ಕಲ್ ಕಡೆ ವೇಗವಾಗಿ ಕಾರೊಂದು ಬಂದಿದ್ದು, ಮಹೇಶ ಅವರು ಓಡಿಸುತ್ತಿದ್ದ ಬೈಕಿಗೆ ಗುದ್ದಿತು.
ಜೈಹಿಂದ್ ಸರ್ಕಲ್ ಹತ್ತಿರ ನಡೆದ ಈ ಅಪಘಾತದಲ್ಲಿ ಮಹೇಶ ಅವರ ಎಡಗಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹಿಮ್ಮಡಿಗೂ ಗಾಯವಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್ ಸಹ ಜಖಂ ಆಗಿದೆ. ಇಷ್ಟಾದರೂ ಕಾರು ಸವಾರ ತನ್ನ ವಾಹನ ನಿಲ್ಲಿಸಿಲ್ಲ. ಹೀಗಾಗಿ ಕಾರು ಚಾಲಕನ ಹೆಸರು-ವಿಳಾಸವೂ ಗೊತ್ತಾಗಿಲ್ಲ. ಅದಾಗಿಯೂ ಮಾರುತಿ ರ‍್ಟಿಗಾ ಕಾರು ಅದಾಗಿದ್ದು, ಕಾರಿನ ನೊಂದಣಿ ಸಂಖ್ಯೆಯ ಜೊತೆ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಪಟಗಾರ ಪೊಲೀಸ್ ದೂರು ನೀಡಿದ್ದಾರೆ.