ಹೊನ್ನಾವರ: ತರಕಾರಿ ಖರೀದಿಗೆ ಬಂದಿದ್ದ ಮಂಜುನಾಥ ಗೌಡ ಎಂಬಾತರಿಗೆ ಕಿಶೋರ ದೇವಾಡಿಗ ಎಂಬಾತರು ಬೈಕ್ ಗುದ್ದಿದ್ದು, ಪರಿಣಾಮ ಮಂಜುನಾಥ ಗೌಡ, ಕಿಶೋರ ದೇವಾಡಿಗ ಅವರ ಜೊತೆ ಗುದ್ದಿದ ಬೈಕಿನಲ್ಲಿ ಹಿಂದೆ ಕೂತಿದ್ದ ಸಂಜನಾ ದೇವಾಡಿಗ ಅವರಿಗೂ ಪೆಟ್ಟಾಗಿದೆ.
ನ 26ರಂದು ಕುಂದಾಪುರದ ಕಿಶೋರ ದೇವಾಡಿಗ ಅವರು ಸಂಜನಾ ದೇವಾಡಿಗರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊನ್ನಾವರ ಸಂಚಾರ ನಡೆಸಿದ್ದರು. ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಕಡೆ ಬೈಕ್ ಚಲಾಯಿಸಿಕೊಂಡು ಬಂದ ಅವರು ಹೊನ್ನಾವರ ಪ್ರಭಾತನಗರದ ಸೆಂಟ್ ಇಗ್ನೇಶಿಯನ್ ಆಸ್ಪತ್ರೆ ಬಳಿ ಮಂಜುನಾಥ ಗೌಡರ ಬೈಕಿಗೆ ತಮ್ಮ ಬೈಕ್ ಗುದ್ದಿದರು.
ಹೊನ್ನಾವರ ಕುಳಗೋಡಿನ ಮಂಜುನಾಥ ಗೌಡ ಅವರು ಆಗಷ್ಟೇ ಮಂಜುನಾಥ ನಾಯ್ಕ ಅವರ ಬಳಿ ತರಕಾರಿ ಖರೀದಿಸಿ ಸ್ಕೂಟರಿನಲ್ಲಿ ಮನೆಗೆ ತೆರಳುತ್ತಿದ್ದರು. ರಸ್ತೆ ದಾಟುವ ತಯಾರಿಯಲ್ಲಿದ್ದ ವೇಳೆ ಅವರಿಗೆ ಬೈಕ್ ಗುದ್ದಿದ್ದರಿಂದ ಆಘಾತಕ್ಕೆ ಒಳಗಾದರು. ಎರಡು ಬೈಕ್ ಜೊತೆ ಮೂವರು ನೆಲಕ್ಕೆ ಬಿದ್ದು ಗಾಯಗೊಂಡರು. ಈ ಅಪಘಾತ ನೋಡಿದ ತರಕಾರಿ ವ್ಯಾಪಾರಿ ಮಂಜುನಾಥ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ, ಬೈಕ್ ಅಪಘಾತಕ್ಕೆ ಕಾರಣರಾದ ಕಿಶೋರ ದೇವಾಡಿಗ ವಿರುದ್ಧ ದೂರು ದಾಖಲಿಸಿದರು.