ಭಟ್ಕಳ: ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಬೈಕ್ ಹೊಂಡಕ್ಕೆ ಬಿದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಹಿಂಬದಿ ಸವಾರ ಜಟ್ಟಪ್ಪ ನಾಯ್ಕ ಎಂಬಾತರ ಎರಡು ಕಾಲು ಮುರಿದಿದೆ.
ಬೆಂಡೆಖಾನ್’ನ ಮಹಮದ್ ಶೇಖ್ ಎಂಬಾತರು ಜಾಲಿಯ ಜಟ್ಟಪ್ಪ ನಾಯ್ಕರನ್ನು ಬೈಕ್ ಮೇಲೆ ಕೂರಿಸಿಕೊಂಡು ಭಟ್ಕಳ ಪೇಟೆ ಕಡೆ ಹೊರಟಿದ್ದರು. ಜಾಲಿಯ ಹಿಟ್ಸ್ ಅಪಾರ್ಟಮೆಂಟ್ ಬಳಿ ಬೈಕ್ ಹೊಂಡಕ್ಕೆ ಬಿದ್ದಿದ್ದು, ಆಗ ಜಟ್ಟಪ್ಪ ನಾಯ್ಕ ಆಯತಪ್ಪಿ ನೆಲಕ್ಕೆ ಅಪ್ಪಳಿಸಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
Discussion about this post