6 Skip to content

ಹಳಿಯಾಳದಲ್ಲಿ ಗುಂಪು ಘರ್ಷಣೆ: ಕೃಷಿಕರ ಮೇಲೆ ಕಲ್ಲು ತೂರಾಟ

ಹಳಿಯಾಳ: ಕೆಸರೊಳ್ಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ಸದಸ್ಯರು ಹಾಗೂ ಹಲವು ಕಾರ್ಮಿಕರ ಮೇಲೆ ದುಷ್ಟರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಪ್ರದೀಪ ಅಂಬಿಪ್ಪಿ, ಅವರ ಮಗ ದರ್ಶನ್ ಅಂಬಿಪ್ಪಿ, ಸಂಬoಧಿ ದೇವರತ್ನ ಅಂಬಿಪ್ಪಿ, ನಾಗೇಂದ್ರ ಪವಾರ್ ಹಾಗೂ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕೈಯಲ್ಲಿ ಕಟ್ಟಿಗೆ, ಕಲ್ಲು, ಗುದ್ದಲಿ ಹಿಡಿದು ಗದ್ದೆಗೆ ಇಳಿದ ಆಗಂತುಕರು ದರ್ಶನ್ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ. ನಂತರ ಸ್ಥಳದಲ್ಲಿದ್ದ ಇನ್ನಿತರರ ಕೊರಳ ಮೇಲೆ ಕೈ ಹಾಕಿ ಎಳೆದಾಡಿದ್ದಾರೆ. ಇನ್ನೂ ಅನೇಕರಿಗೆ ಕಾಲುಗಳಿಂದ ಒದ್ದು ಹಿಂಸಿಸಿದ್ದಾರೆ. ಗಣಪತಿ ಕರಂಜೆಕರ್, ಲೋಕೇಶ ಕರೆಂಜೆಕರ್, ನಾಗೇಂದ್ರ ಕೆಂಜೆಕರ್, ಶಿವಾಜಿ ಕರೆಂಜೆಕರ್, ಅರ್ಜುನ ಗೌಡ, ಉದಯ ಗೌಡ ಇನ್ನಿತರರು ಸೇರಿ ಆಕ್ರಮಣ ಮಾಡಿರುವ ಬಗ್ಗೆ ನೊಂದವರು ಪೊಲೀಸ್ ದೂರು ನೀಡಿದ್ದಾರೆ.

Leave a comment

Leave a Reply

You cannot copy content of this page