6
  • Latest
ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಬರದ ಮೇಲೆ ಬರೆ ಹಸಿರು ಬರಗಾಲ!

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

ADVERTISEMENT
  • Home
Sunday, August 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

AchyutKumar by AchyutKumar
July 11, 2026
in ಸ್ಥಳೀಯ
advt advt advt
ADVERTISEMENT

ಸದಾ ಸದಭಿರುಚಿಯ ಚಿತ್ರಗಳಿಂದ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೂಡ ಅಂಥದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ.‌ ಭೂಗತ ರೌಡಿಗಳ ಕಥೆಯನ್ನು ಇಟ್ಟುಕೊಂಡು ಲವ್ ಸ್ಟೋರಿಗಳು ಬಂದಿವೆ. ಆದರೆ ಕೌಟುಂಬಿಕ ಕಥೆಯನ್ನು ಕೂಡ ಇಷ್ಟು ಚೆನ್ನಾಗಿ ಹೇಳಬಹುದು ಎನ್ನವುದನ್ನು ಸಾಬೀತು ಮಾಡಿರುವ ಚಿತ್ರ ರಕ್ಕಿ.

ADVERTISEMENT

ಅಪರಾಧದ ಹಿನ್ನೆಲೆಯ ಚಿತ್ರವಾದರೂ ಎಲ್ಲಿಯೂ ರಕ್ತಪಾತವಿಲ್ಲ. ಕೇಂದ್ರ ಪಾತ್ರ ರಿಕ್ಕಿಯ ವಿಚಾರಕ್ಕೆ ಬರುವುದಾದರೆ ಯುವನಟರ ಸಾಲಿಗೆ ಸೇರಿಸಬಹುದಾದ ಪ್ರತಿಭಾವಂತ ಕಲಾವಿದ ರಿಕ್ಕಿ.
ನಟನೆ ಮಾತ್ರವಲ್ಲದೆ ಆ್ಯಕ್ಷನ್ ದೃಶ್ಯಗಳಲ್ಲಿಯೂ ಗಮನ ಸೆಳೆಯುತ್ತಾರೆ.

ADVERTISEMENT
ADVERTISEMENT

ಕಥೆ:
ರಕ್ಕಿ (ರಕ್ಕಿ ಸುರೇಶ್) ಎತ್ತರವಾದ, ಸುಂದರವಾದ ರೌಡಿ! ಆತ ಅಂಡರ್‌ವರ್ಲ್ಡ್ ಆಪರೇಟರ್ ಡ್ಯಾನಿ (ಬಿ. ಸುರೇಶ) ಕೈ‌ಕೆಳಗೆ ಕೆಲಸ ಮಾಡುತ್ತಾನೆ. ಬಾಸ್ ಹೇಳಿದಂತೆ ರಕ್ಕಿ ಎಲ್ಲಾ ಕೆಲಸಗಳನ್ನು ಮಾಡುತ್ತಾನೆ. ಆದರೆ ಡ್ಯಾನಿಯ ಮಗಳು ಸಿರಿ (ಪಲ್ಲವಿ) ಅವನನ್ನು ಹುಚ್ಚು ಹುಚ್ಚಾಗಿ ಪ್ರೀತಿಸುತ್ತಾಳೆ. ಮೊದಲಿಗೆ ರಕ್ಕಿ ಅವಳ ಪ್ರೀತಿಯನ್ನು ತಿರಸ್ಕರಿಸಿದರೂ, ಆನಂತರ ಒಪ್ಪಿಕೊಳ್ಳುತ್ತಾನೆ. ಸಿರಿ ರಕ್ಕಿ ತನ್ನ ಕೆಟ್ಟ ಕೆಲಸಗಳನ್ನು ಬಿಟ್ಟುಬಿಡಬೇಕೆಂದು ಬಯಸುತ್ತಾಳೆ. ಆದರೆ ಶಾಸಕ ಸ್ಥಾನದ ಚುನಾವಣಾ ಟಿಕೆಟ್ ಆಕಾಂಕ್ಷಿಯೊಬ್ಬನನ್ನು ಮುಗಿಸಲು ಡ್ಯಾನಿ ಕೈಗೊಂಡ ದೊಡ್ಡ ಡೀಲ್‌ನಿಂದ ಹಲವಾರು ಅನಿರೀಕ್ಷಿತ ಬೆಳವಣಿಗೆಗಳು ಆಗುತ್ತವೆ.

Advertisement. Scroll to continue reading.

ಡ್ಯಾನಿ ಕೆಲಸವನ್ನು ಮುಗಿಸಲು ರಕ್ಕಿ ಮತ್ತು ಗಣೇಶ್ (ಸಂಪತ್) 130 ಕಿಲೋಮೀಟರ್ ಪ್ರಯಾಣ ಮಾಡ ಬೇಕಾಗುತ್ತದೆ. ಈ ಹಂತದಲ್ಲಿ ಕೆಲವು ಅಚ್ಚರಿಯ ಸತ್ಯಗಳು ಬಹಿರಂಗವಾಗಿ ಕ್ಲೈಮ್ಯಾಕ್ಸ್‌ಗೆ ಹೊಸ ಆಶಯ ನೀಡುತ್ತವೆ. ಇಲ್ಲಿ ಚಾಂದಿನಿ (ಆಶಿಕಾ) ಮತ್ತು ಒಬ್ಬ ರಾಜಕಾರಣಿಯೂ ಇದ್ದಾರೆ. ಈ ಸಮಯದಲ್ಲಿ ರಕ್ಕಿ ಮತ್ತು ಚಾಂದಿನಿಯ ಕಥೆಯನ್ನು ಹೇಳುವ ಫ್ಲ್ಯಾಶ್‌ಬ್ಯಾಕ್ ಬರುತ್ತದೆ.

ಆ ಡೀಲ್ ರಕ್ಕಿ ಮತ್ತು ಗಣೇಶ್‌ನಿಂದ ಮುಗಿಯುತ್ತದೆಯಾ? ಅವನ ಇಂದಿನ ಮತ್ತು ಹಿಂದಿನ ಪ್ರೀತಿಗೆ ಏನಾಗುತ್ತದೆ? ರಕ್ಕಿ ಜೀವನದಲ್ಲಿ ಹೇಗೆ ನೆಲೆ ಕಂಡುಕೊಳ್ಳುತ್ತಾನೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೀವು ರಕ್ಕಿ ಚಿತ್ರವನ್ನು ನೋಡಲೇಬೇಕು.

ಕಲಾವಿದರ ಅಭಿನಯ

ಮೊದಲೇ ಹೇಳಿದಂತೆ ರಕ್ಕಿ ಸುರೇಶ್ ಖಂಡಿತವಾಗಿ ಒಬ್ಬ ಸ್ಟಾರ್ ಮೆಟಿರಿಯಲ್. ಫೈಡ್ ಮತ್ತು ಡ್ಯಾನ್ಸ್‌ನಲ್ಲಿ ಕೂಡ ಚೆನ್ನಾಗಿದ್ದಾರೆ. ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಚೊಚ್ಚಲ ಚಿತ್ರದಲ್ಲೇ ರಕ್ಕಿ ಸುರೇಶ್ ಮನ ಗೆಲ್ಲುತ್ತಾರೆ. ದ್ವಿತೀಯಾರ್ಧದ ಫ್ಲ್ಯಾಶ್‌ಬ್ಯಾಕ್ ಭಾಗಗಳಲ್ಲಿ ಅವರು ಟಾಪ್ ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಅವರಂತೆ ಕಾಣುತ್ತಾರೆ. ಆದರೂ ರಕ್ಕಿ ಸುರೇಶ್ ಸಂಭಾಷಣೆ ಹೇಳುವಿಕೆಯಲ್ಲಿ ಇನ್ನೂ ಸುಧಾರಿಸಿಕೊಳ್ಳಬೇಕು.

ಚಿತ್ರದ ಇಬ್ಬರು ನಾಯಕಿಯರಾದ ಪಲ್ಲವಿ ಮತ್ತು ಆಶಿಕಾ ಉತ್ತಮ ಅಭಿನಯ ನೀಡಿದ್ದಾರೆ. ನೋಟದಲ್ಲೇ ನಾಯಕ ನಟಿಯ ಆಕರ್ಷಣೆಯಿದೆ. ಇಬ್ಬರಿಗೂ ಬೆಳ್ಳಿತೆರೆಯಲ್ಲಿ ಉಜ್ವಲ ಭವಿಷ್ಯವಿದೆ. ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ ಮತ್ತು ಬಾಲ ರಾಜ್‌ವಾಡಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಕಥೆಗೆ ವಿಭಿನ್ನ ಆಯಾಮ ನೀಡುವಂಥ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

ಇನ್ನಿತರ ವಿಚಾರಗಳು

Advertisement. Scroll to continue reading.

ಸಂಗೀತದ ಸಂಗತಿಯಲ್ಲೂ ಚಿತ್ರ ತುಂಬಾ ಚೆನ್ನಾಗಿದೆ. ಲೋಕಿ ತವಸ್ಯ ಅವರು “ವೈಬ್ ಆಗಿದೆ..” ಮತ್ತು “ನೀನು ನನಗಂತ ಬರೆದ ಭಗವಂತ” ಎಂಬ ಎರಡು ಮಧುರ ಹಾಡುಗಳನ್ನು ಸಂಯೋಜಿಸಿದ್ದಾರೆ. ಇಂಟ್ರೋ ಹಾಡು, ರೌಡಿ ಹಾಡು ಮತ್ತು ಫ್ಯಾಮಿಲಿ ಹಾಡು “ಹೇಟ್ ಯು ಡ್ಯಾಡಿ ಹೇಟ್ ಯು ಮಮ್ಮಿ…” ಕೂಡ ಕೇಳಲು ಯೋಗ್ಯವಾಗಿವೆ.

Advertisement. Scroll to continue reading.

122 ನಿಮಿಷಗಳ ಚಿತ್ರದಲ್ಲಿ ಛಾಯಾಗ್ರಾಹಕ ಐಸಾಕ್ ಪ್ರಭಾಕರ್ ಅತ್ಯಂತ ಸುಂದರವಾದ ದೃಶ್ಯ ಅನುಭವ ನೀಡಿದ್ದಾರೆ. ಆಕ್ಷನ್ ನಿರ್ದೇಶಕ ಟೈಗರ್ ಶಿವು ಕೆಲವು ಉತ್ತಮ ಆಕ್ಷನ್ ಸನ್ನಿವೇಶಗಳನ್ನು ತೋರಿಸಿದ್ದಾರೆ.
ಸಂಭಾಷಣೆ ಗುಣಮಟ್ಟ ಇನ್ನಷ್ಟು ಹೆಚ್ಚಿಸಬಹುದಿತ್ತು. ಆದರೆ “ಸರಸ್ವತಿ ಅಂದ್ರೆ ಟ್ಯಾಲೆಂಟ್, ಲಕ್ಷ್ಮಿ ಅಂದ್ರೆ ಎಂಟರ್‌ಟೈನ್‌ಮೆಂಟ್…” ಎನ್ನುವ ಡೈಲಾಗ್ ಖಂಡಿತವಾಗಿ ಗಮನ ಸೆಳೆಯುತ್ತದೆ.

ಒಟ್ಟಿನಲ್ಲಿ ಯಾವ ದೃಷ್ಟಿಕೋನದಿಂದ ನೋಡಿದರೂ ರಕ್ಕಿ ಖಂಡಿತವಾಗಿ ಒಂದು ಒಳ್ಳೆಯ ಸಿನೆಮಾ. ಗೆಳೆಯರೊಂದಿಗೆ, ಪ್ರೇಯಸಿಯೊಂದಿಗೆ ಮಾತ್ವವಲ್ಲ ಕುಟುಂಬದೊಂದಿಗೆ ವೀಕ್ಷಿಸಲು ಕೂಡ ಇದೇ ಮೊದಲ ಆಯ್ಕೆ ಎಂದು ಧೈರ್ಯದಿಂದ ಹೇಳಬಹುದು.

ShareSendTweetShare
ADVERTISEMENT
Previous Post

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

Next Post

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

Next Post
ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್' ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಬಿಡುಗಡೆ ಮುನ್ನವೇ ಸದ್ದು ಮಾಡಿದ ಓ ಮೈ ಡಾಗ್

ಬಿಡುಗಡೆ ಮುನ್ನವೇ ಸದ್ದು ಮಾಡಿದ ಓ ಮೈ ಡಾಗ್

ಮಾರುಕಟ್ಟೆಗೆ ಬಂದ ಮೆಣಸು

ಮಾರುಕಟ್ಟೆಗೆ ಬಂದ ಮೆಣಸು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

×

No WhatsApp Number Found!