6
  • Latest

ಬರದ ಮೇಲೆ ಬರೆ ಹಸಿರು ಬರಗಾಲ!

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

ದೇಗುಲದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾಂವ ಬಂದ್‌ಗೆ ವ್ಯಾಪಾರಸ್ಥರ ಬೆಂಬಲ

ದೇಗುಲದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾಂವ ಬಂದ್‌ಗೆ ವ್ಯಾಪಾರಸ್ಥರ ಬೆಂಬಲ

ADVERTISEMENT
  • Home
Sunday, August 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಬರದ ಮೇಲೆ ಬರೆ ಹಸಿರು ಬರಗಾಲ!

ಹಾವೇರಿ ರೈತರ ಆಕ್ರಂದನ ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ? – ಬಿ.ಸಿ. ಪಾಟೀಲ್ ಪ್ರಶ್ನೆ

Kiran Reporter Haveri by Kiran Reporter Haveri
August 30, 2026
in ಸ್ಥಳೀಯ
advt advt advt
ADVERTISEMENT

ಹಾವೇರಿ: ಧಾರಾಕಾರವಾಗಿ ಸುರಿಯಬೇಕಿದ್ದ ಮಳೆ ಕೈಕೊಟ್ಟ ಪರಿಣಾಮ ಹಾವೇರಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ.ಸಿ. ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ. ಹೊಲಗಳಲ್ಲಿ ಬಿತ್ತಿದ ಬೆಳೆಗಳು ಕಣ್ಣೆದುರೇ ಒಣಗಿ ಹೋಗುತ್ತಿದ್ದು, ಸಾಲ ಮಾಡಿ ಮರುಬಿತ್ತನೆ ಮಾಡಿದ ರೈತರಿಗೆ ಮಳೆಯಿಲ್ಲದೆ ಬೀಜವೂ ಮಣ್ಣು ಪಾಲಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಹೊಲದಲ್ಲಿ ಮೇಲ್ನೋಟಕ್ಕೆ ಹಸಿರು ಕಾಣಿಸಿಕೊಂಡರೂ ಸರಿಯಾದ ಇಳುವರಿ ಸಿಗುವ ಪರಿಸ್ಥಿತಿ ಇಲ್ಲ. ಆದರೆ, ಜಿಲ್ಲೆಯ ನೈಜ ಸ್ಥಿತಿಗತಿ ಹಾಗೂ ರೈತರ ಸಂಕಷ್ಟವನ್ನು ಅರಿಯಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, “ಹೊಲದಲ್ಲಿ ಹಸಿರು ಕಂಡ ತಕ್ಷಣ ಬರಗಾಲವೇ ಇಲ್ಲ” ಎಂಬ ರೀತಿಯ ಹಗುರವಾದ ಹೇಳಿಕೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಬಿ.ಸಿ. ಪಾಟೀಲ್ ಕಿಡಿಕಾರಿದ್ದಾರೆ.

ADVERTISEMENT
ADVERTISEMENT

ಹಾವೇರಿ ಜಿಲ್ಲೆಯ ರೈತರು ಇಷ್ಟೊಂದು ಸಂಕಷ್ಟದಲ್ಲಿದ್ದರೂ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸದಿರುವುದು ತೀವ್ರ ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.

Advertisement. Scroll to continue reading.

ಆರು ಶಾಸಕರು, ಸಚಿವರಿದ್ದರೂ ರೈತರ ಕಣ್ಣೀರು ಕಾಣುತ್ತಿಲ್ಲವೇ?

Advertisement. Scroll to continue reading.

ಹಾವೇರಿ ಜಿಲ್ಲೆಯಲ್ಲಿ ಆರು ಜನ ಶಾಸಕರಿದ್ದಾರೆ, ಸಚಿವರೂ ಇದ್ದಾರೆ. ಆದರೂ ಜಿಲ್ಲೆಯ ರೈತರ ಕಣ್ಣೀರು ಮತ್ತು ಬೆಳೆ ಹಾನಿ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಬಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ.

ರೈತರ ಹಿತ ಕಾಯಲು ಅಧಿಕಾರ ನೀಡಲಾಗಿದೆ. ಆದರೆ ರೈತರು ಸಂಕಷ್ಟದಲ್ಲಿರುವಾಗ ಅವರ ನೋವಿಗೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಕ್ಕೆ ಏನು ಅರ್ಥ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಜಂಟಿ ಸಮೀಕ್ಷೆಗೆ ಆಗ್ರಹ

ಹಾವೇರಿ ಜಿಲ್ಲೆಯ ನೈಜ ಬೆಳೆ ಹಾನಿಯ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಬಿ.ಸಿ. ಪಾಟೀಲ್ ಆಗ್ರಹಿಸಿದ್ದಾರೆ.

ಅಲ್ಲದೆ,

– ಹಾವೇರಿ ಜಿಲ್ಲೆಯ ಸಂಕಷ್ಟಕ್ಕೊಳಗಾದ ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು.

Advertisement. Scroll to continue reading.

– ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತನಿಗೂ ಸೂಕ್ತ ಪರಿಹಾರ ನೀಡಬೇಕು.

– ಬೆಳೆ ವಿಮೆ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು.

– ಬರ ಪರಿಹಾರ ಕಾರ್ಯಗಳನ್ನು ತಕ್ಷಣ ಆರಂಭಿಸಬೇಕು.

ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ರೈತ ಬೆಳೆದರೆ ಮಾತ್ರ ದೇಶ ಉಳಿಯುತ್ತದೆ. ರೈತನ ಹೊಟ್ಟೆಗೆ ಹೊಡೆಯುವ ಕೆಲಸ ನಿಲ್ಲಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಹಾವೇರಿ ಜಿಲ್ಲೆಯ ರೈತರ ನೆರವಿಗೆ ಧಾವಿಸಬೇಕು,” – ಬಿ.ಸಿ. ಪಾಟೀಲ್

ShareSendTweetShare
ADVERTISEMENT
Previous Post

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

×

No WhatsApp Number Found!