ಕುಮಟಾ: ಕೋಡ್ಕಣಿ ಕೋಟೆ ಕ್ರಾಸ್ ಬಳಿ ಬುಧವಾರ ಗಾಂಜಾ ಮಾರಾಟ ಮಾಡುತ್ತಿದ್ದ ಶರತ್ ನಾಯ್ಕ’ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಳಿ 179 ಗ್ರಾಂ ಗಾಂಜಾ ಸಿಕ್ಕಿದೆ.
ಕೋಡ್ಕಣಿಯ ಶರತ್ ಜನಾರ್ದನ ನಾಯ್ಕ ಹೊಂಡಾ ಕಂಪನಿಯ ಡಿಯೋ ಸ್ಕೂಟರಿ’ನಲ್ಲಿ ಕೋಡ್ಕಣಿ ಕೋಟೆ ಕ್ರಾಸ್ ಬಳಿ ಬಂದಿದ್ದ. ಅಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ. ಪಿಎಸ್‌ಐ ಸಾವಿತ್ರಿ ನಾಯಕ ಆತನನ್ನು ನೋಡಿದರು. ಆಗ, ಆತ ತನ್ನಲ್ಲಿದ್ದ ಗಾಂಜಾವನ್ನು ಅಡಿಗಿಸಿಡುವ ಪ್ರಯತ್ನ ನಡೆಸಿದ್ದ.
ದಾಳಿ ನಡೆಸಿದ ಪೊಲೀಸರು 10 ಸಾವಿರ ರೂ ಬೆಲೆಯ ಗಾಂಜಾವನ್ನು ವಶಕ್ಕೆ ಪಡೆದರು. ಆತನ ಸ್ಕೂಟರನ್ನು ಜಪ್ತು ಮಾಡಿದರು. ಪಿಎಸ್‌ಐ ಮಂಜುನಾಥ ಗೌಡರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.