ಮುoಡಗೋಡ: ಕಾಡಿನಲ್ಲಿ ಸಂಚರಿಸಬೇಕಿದ್ದ ಜಿಂಕೆ ದಾರಿ ತಪ್ಪಿ ಊರಿಗೆ ಬಂದಿದ್ದು, ಬೀದಿ ನಾಯಿಗಳು ಜಿಂಕೆ ಮೇಲೆ ಆಕ್ರಮಣ ನಡೆಸಿದವು. ಇದನ್ನು ನೋಡಿದ ಸನವಳ್ಳಿ ಜನ ಜಿಂಕೆಯನ್ನು ರಕ್ಷಿಸಿ ಕಾಡಿನ ದಾರಿ ತೋರಿಸಿದರು.
ಕಾಡಿನಲ್ಲಿ ಆಹಾರ ಅರೆಸುತ್ತಿದ್ದ ಜಿಂಕೆ ಭಾನುವಾರ ದಾರಿ ತಪ್ಪಿ ಸನವಳ್ಳಿಗೆ ಬಂದಿತು. ಇಲ್ಲಿನ ಬೀದಿ ನಾಯಿಗಳು ಜಿಂಕೆಯ ಸುತ್ತಲು ಸುತ್ತುವರೆದು ಬೆದರಿಸಿದವು. ಆಕ್ರಮಣದಿಂದ ತಪ್ಪಿಸಿಕೊಳ್ಳಲು ಜಿಂಕೆ ಸಾಕಷ್ಟು ಪ್ರಯತ್ನ ನಡೆಸಿದರೂ, ಬೊಗಳುವ ಸದ್ದಿಗೆ ಕಾಡು ಜೀವಿ ಬೆದರಿತು. ಈ ವೇಳೆ ಕೆಲ ನಾಯಿಗಳು ಜಿಂಕೆಯ ಬಾಲದ ಕಡೆ ದಾಳಿ ನಡೆಸಿ ಗಾಯಗೊಳಿಸಿದವು.
ಇದನ್ನು ನೋಡಿದ ಸನವಳ್ಳಿ ಗ್ರಾಮದ ರೈತ ಮುಖಂಡ ರಾಜು ಗುಬ್ಬಕ್ಕನವರ್ ನಾಯಿಗಳನ್ನು ಬೆದರಿಸುವ ಕೆಲಸ ಮಾಡಿದರು. ನಾಯಿಗಳು ಬೆದರದಿದ್ದಾಗ ಸುರೇಶ ಕೆರಿಹೊಲದವರ್, ಆನಂದ ಜಮ್ಮಕ್ಕನವರ್, ಬಸವರಾಜ ಅರಶಿಣಗೇರಿ ಸೇರಿ ಹಲವರನ್ನು ಕರೆದರು. ಎಲ್ಲರೂ ಸೇರಿ ನಾಯಿಗಳಿಗೆ ಕೋಲು ಹಿಡಿದರು.
ಅದಾದ ನಂತರ ಅರಣ್ಯ ಸಿಬ್ಬಂದಿ ರಾಜು ಪರೇಟ್ ಆಗಮಿಸಿ, ಜಿಂಕೆಯನ್ನು ಸುರಕ್ಷಿತವಾಗಿ ಕಾಡಿನ ಕಡೆ ಬಿಟ್ಟರು.