ಮುಂಡಗೋಡ: ಪಟ್ಟಣದ ಹಲವು ಭಾಗದಲ್ಲಿ ವಾಸಿಸುತ್ತಿರುವ ಅರಣ್ಯ ಅತಿಕ್ರಮಣ ನಿವೇಶನದಾರರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಪಟ್ಟಣದ ಜನ ಮಂಗಳವಾರ ಪ್ರತಿಭಟನೆ ನಡೆಸಿದರು.
`ಮುಂಡಗೋಡ ಪಟ್ಟಣ ಪಂಚಾಯಿತದಿAದ ಇಂದಿರಾನಗರ, ಆನಂದ ನಗರ, ಗಣೇಶ ನಗರ, ಗಾಂಧಿನಗರ ಪ್ರದೇಶಗಳು ಸಾಕಷ್ಟು ಹಿಂದುಳಿದಿದೆ. ಇಲ್ಲಿನವರಿಗೆ ಈವರೆಗೂ ಪಾರಂ ನಂ 3 ಸಿಕ್ಕಿಲ್ಲ. ಕುಡಿಯುವ ನೀರು ಸಹ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಹೋರಾಟ ನಡೆಸಿದರೂ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು.
ತಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಸಿದರು. ಅರಣ್ಯ ಅತಿಕ್ರಮಣ ನಿವೇಶನಗಳ ಹಕ್ಕು ಹೋರಾಟ ಸಂಘದ ಅಧ್ಯಕ್ಷರಾದ ಅಲ್ಲಿಖಾನ ಪಠಾಣ, ಉಪಾಧ್ಯಕ್ಷರಾದ ರಾಜು ಭೋವಿ ಮತ್ತು ಜಾಫರ ಚೌಡಿ, ಕಾರ್ಯದರ್ಶಿ ವಿಠ್ಠಲ ಬಾಳಂಬೀಡ, ಸಹ ಕಾರ್ಯದರ್ಶಿ ವೆಂಕಟೇಶ ತಳವಾರ, ಖಜಾಂಚಿ ಶಿವು ಮತ್ತಿಗಟ್ಟಿ, ಗೌರವಾಧ್ಯಕ್ಷರಾದ ಹುಲಗಪ್ಪ ಭೋವಿವಡ್ಡರ, ಪಟ್ಟಣ ಪಂಚಾಯತ ಸದಸ್ಯ ವಿಶ್ವನಾಥ ಪವಾಡಶೆಟ್ಟರ್ ಈ ಹೋರಾಟದಲ್ಲಿ ಕಾಣಿಸಿಕೊಂಡರು.