ಕುಮಟಾ: ಗಂಧರ್ವ ಕಲಾ ಕೇಂದ್ರದ ಸಂಗೀತ ವಿದ್ಯಾಲಯ ಚಿಣ್ಣರು ವಾರ್ಷಿಕ ಉತ್ಸವದ ಅಂಗವಾಗಿ ನಡೆಸಿದ ಗಾಯನ ಕಿವಿಗೆ ಇಂಪು ನೀಡುವಂತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ವಿವಿಧ ವಾದನ ಗೋಷ್ಠಿಗಳು ಅಚ್ಚುಕಟ್ಟಾಗಿ ನಡೆದವು. ಉದ್ಯಮಿ ಜಯಶ್ರೀ ಕಾಮತ ಮಾತನಾಡಿ ರಜತ ಮಹೋತ್ಸವದ ಹೊಸ್ತಿನಲ್ಲಿರುವ ಗಂಧರ್ವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಎನ್. ಆರ್. ಗಜು ಮಾತನಾಡಿ `ಸಂಗೀತವು ಏಕತೆ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುತ್ತದೆ’ ಎಂದರು. ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಎಲ್ ಭಟ್ಟ ಮಾತನಾಡಿ `ಗಂಧರ್ವ ವಿದ್ಯಾಲಯದ ಸಂಸ್ಥಾಪಕರಾದ ಗೌರೀಶ ಯಾಜಿಯವರ ನೇತೃತ್ವದಲ್ಲಿ ಬೆಳೆದು ಬಂದ ಸಂಗೀತ ವಿದ್ಯಾಲಯವು ಕಳೆದ ೨೦ ವರ್ಷಗಳಲ್ಲಿ ಸಹಸ್ರಾಸು ಸಂಗೀತ ಕಲಾವಿದರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ’ ಎಂದರು.
ಗಂಧರ್ವ ಕಲಾಕೇಂದ್ರದ ಉಪಾಧ್ಯಕ್ಷ ಎಸ್. ಎನ್. ಭಟ್ಟ, ಕೊಂಕಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ. ಆರ್. ನಾಯಕ ಇದ್ದರು.
Discussion about this post