ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆ ಪತ್ರಿಕಾ ತುಣುಕು ಸೇರಿಸಿದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಅನೇಕರು ಸಿಎಸ್‌ಇ ಕೇಂದ್ರಗಳಿಗೆ ತೆರಳಿ ನಿರಾಶರಾಗುತ್ತಿದ್ದಾರೆ. ಅಲ್ಲಿನ ಸಿಬ್ಬಂದಿ ಸಹ ಬಂದವರಿಗೆ `ಇಂಥ ಯೋಜನೆ ಇಲ್ಲ’ ಎಂದು ತಿಳಿಸಿದರೂ, ಜನ ನಂಬುತ್ತಿಲ್ಲ!
`ಪ್ರಧಾನಮoತ್ರಿ ಪಿಎಂ ಕನ್ಯಾ ಯೋಜನೆ’ ಎಂಬ ಹೆಸರಿನಲ್ಲಿ ಈಚೆಗೆ ಪತ್ರಿಕಾ ವರದಿಯೊಂದು ಸಾಕಷ್ಟು ವೈರಲ್ ಆಗಿದೆ. ಹೆಣ್ಣು ಮಕ್ಕಳಿಗೆ ಆದಾಯ ತಂದುಕೊಡುವ ಯೋಜನೆಯ ಕುರಿತಾಗಿ ಇದರಲ್ಲಿ ಮಾಹಿತಿ ಇದ್ದು, ಹೆಣ್ಣು ಮಕ್ಕಳ ಪಾಲಕರು ಈ ಯೋಜನೆ ಪ್ರಯೋಜನ ಪಡೆಯಲು ಎಲ್ಲಾ ಕೆಲಸ ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂ ಬರುತ್ತದೆ ಎಂದು ನಂಬಿದ ಜನ ಆಧಾರ್ ಕಾರ್ಡ ಜೊತೆ ಬ್ಯಾಂಕ್ ಪಾಸ್ ಬುಕ್, ಮಗುವಿನ ಫೋಟೋ ಹಿಡಿದು ಅಲ್ಲಲ್ಲಿ ಅಡ್ಡಾಡುತ್ತಿದ್ದಾರೆ. ಜೊತೆಗೆ ಆದಾಯ ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಬರುವ ಅರ್ಜಿಗಳ ಸಂಖ್ಯೆಯೂ ಹೆಚ್ಚಾಗಿದೆ. `ಪ್ರಧಾನಮಂತ್ರಿ ಪಿಎಂ ಕನ್ಯಾ ಯೋಜನೆ’ಗೆ ಪ್ರಯೋಜನಕ್ಕಾಗಿ ಆದಾಯ ಪ್ರಮಾಣ ಪತ್ರ ಕೊಡಿ ಎಂದು ಅರ್ಜಿ ಸಲ್ಲಿಸಿದವರೂ ಇದ್ದಿದ್ದರಿಂದ ಸರ್ಕಾರಿ ಸಿಬ್ಬಂದಿ ಸಹ ತಬ್ಬಿಬ್ಬಾಗಿದ್ದಾರೆ. ಇದೀಗ `ಕನ್ನಡ ಪಾಕ್ಟ್ ಚೆಕ್’ ತಂಡದವರು ಇಂಥಹ ಯಾವುದೇ ಯೋಜನೆ ಇಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಜಾಗೃತಿ ಮೂಡಿಸಿದ್ದಾರೆ.
Discussion about this post