6 Skip to content

ದೇವರ ಹೆಸರಲ್ಲಿ ನಕಲಿ ಖಾತೆ!

ಮಂಗಳೂರು: ಆನ್ ಲೈನ್ ವಂಚಕರು ಇದೀಗ ದೇವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಭಕ್ತರನ್ನು ಯಾಮಾರಿಸುತ್ತಿದ್ದಾರೆ.
ಕೊರಗಜ್ಜನ ಹೆಸರಿನಲ್ಲಿ ಖಾತೆ ತೆರೆದು ಹಣ ಯಾಚಿಸಿರುವ ಬಗ್ಗೆ ಅರಿತ ಕುತ್ತಾರು ದೇವಸ್ಥಾನ ಆಡಳಿತ ಮಂಡಳಿಯವರು ಭಕ್ತರಿಗೆ  ಆನ್ ಲೈನ್ ಮೂಲಕ ಹಣ ಪಾವತಿಸದಂತೆ ಮನವಿ ಮಾಡಿದ್ದಾರೆ. ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕೊರಗಜ್ಜನನ್ನು ನಂಬುವ ಲಕ್ಷಾಂತರ ಭಕ್ತರಿದ್ದಾರೆ. ಕುತ್ತಾರು ಕೊರಗಜ್ಜ ದೇವಸ್ಥಾನ ಕೊರಗಜ್ಜನ ಮೂಲಸ್ಥಾನ ಎನ್ನುತ್ತಾರೆ. ಹೀಗಾಗಿ ಕಿಡಿಗೇಡಿಗಳು `ಡಿವೋಟೀಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದಾರೆ.

Leave a comment

Leave a Reply

You cannot copy content of this page