ರೈತರಿಗೆ ಮುಖ್ಯ ಮಾಹಿತಿ: ಪಿಎಂ ಕಿಸಾನ್ ಇ-ಕೆವೈಸಿ ಕಡ್ಡಾಯ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಪಿ ಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ರೈತರು ಪ್ರತಿ ವರ್ಷವೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಕೆ. ಅವರು ತಿಳಿಸಿದ್ದಾರೆ. ಇ-ಕೆವೈಸಿ ಪೂರ್ಣಗೊಳಿಸಲು ಬಯೋಮೇಟ್ರಿಕ್ ಆಧಾರಿತ ಇ-ಕೆವೈಸಿ ಹಾಗೂ ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿ ಎಂಬ ಎರಡು ವಿಧಾನಗಳಿವೆ. ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಹತ್ತಿರದ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ), ಗ್ರಾಮ್‌ಒನ್, ಕರ್ನಾಟಕಒನ್ ಸೇವಾ ಕೇಂದ್ರ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಬಿ.ಎನ್.ಒ. ಲಾಗಿನನಲ್ಲಿ ಆಧಾರ ಕಾರ್ಡ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಮುಖ ಗುರುತಿಸುವಿಕೆ ಇ-ಕೆವೈಸಿಯನ್ನು ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಎನ್.ಒ.ಗಳು ಅಥವಾ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ Golಆ್ಯಪ್ ಮೂಲಕ ಸ್ವತಃ ಇ-ಕೆವೈಸಿಯನ್ನು ಮಾಡಿಕೊಳ್ಳಲು ಕೋರಲಾಗಿದೆ.
