ಹಾಸನ: ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್ ಹಾಸನ ಬಂದಿದ್ದು, ಇಲ್ಲಿನ ಸರ್ಕಾರಿ ಶಾಲೆ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಚೆನ್ನರಾಯಪಟ್ಟಣದ ಕಬ್ಬಳ್ಳಿ ಗ್ರಾಮ ಪ್ರವೇಶಿಸಿದ ಸನ್ನಿಯನ್ನು ನೋಡಲು ಪಡ್ಡೆ ಹುಡುಗರು ಮುಗಿ ಬಿದ್ದಿದ್ದಾರೆ. ಕೆಲ ಹೊತ್ತು ಮಕ್ಕಳ ಜೊತೆ ಕಾಲ ಕಳೆದ ಸನ್ನಿ ಲಿಯೋನ್ ನಂತರ ಚಿತ್ರಿಕರಣದ ಚಿತ್ರದ ಕಥೆ ಓದಿದರು. ವಿವೇಕ್ ಕೆ ಕಣ್ಣನ್ ನಿರ್ದೇಶನದ `ಕೊಟೇಶನ್ ಗ್ಯಾಂಗ್’ ಎಂಬ ಚಿತ್ರ ಇದಾಗಿದೆ. ಜಾಕಿ ಶ್ರಾಫ್ ಹಾಗೂ ಪ್ರಿಯಾಮಣಿ ಸಹ ಚಿತ್ರದಲ್ಲಿದ್ದಾರೆ.
Discussion about this post