ಹಳಿಯಾಳ: ಸುಚಿತ್ರಾ ವೈನ್‌ಶಾಫಿನಲ್ಲಿ ಕೆಲಸ ಮಾಡುವ ಸುನೀಲ ಶೆಟ್ಟಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ತಮ್ಮ ಸ್ಕೂಟಿ ಗುದ್ದಿ ಸಾವನಪ್ಪಿದ್ದಾರೆ.
ಡಿ 20ರಂದು ಸಂಜೆ ಅವರು ತೆರಗಾವ್ ತರ್ಪಿನಿಂದ ಹಳಿಯಾಳ ಕಡೆ ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದರು. ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಅವರು ಸ್ಕೂಟಿ ಗುದ್ದಿದರು. ಇದರಿಂದ ಗಂಭೀರ ಗಾಯಗೊಂಡ ಸುನೀಲ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಆ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ವೈದ್ಯರು ಸುನೀಲ ಶೆಟ್ಟಿ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಕೆಎಸ್‌ಆರ್‌ಟಿಸಿ ಚಾಲಕ ಸಾಗರ ಧಾರವಾಡಕರ್ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದರು.