6
  • Latest

ಹೊಸ ನಿಯಮ | ಆಸ್ಪತ್ರೆ ಸೇರಿ 11 ತಾಸು ಬದುಕಿದ್ದರೆ ಮಾತ್ರ ತುರ್ತು ಚಿಕಿತ್ಸೆ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಹೊಸ ನಿಯಮ | ಆಸ್ಪತ್ರೆ ಸೇರಿ 11 ತಾಸು ಬದುಕಿದ್ದರೆ ಮಾತ್ರ ತುರ್ತು ಚಿಕಿತ್ಸೆ!

AchyutKumar by AchyutKumar
December 21, 2024
in ವಿಡಿಯೋ
advt advt advt
ADVERTISEMENT

ಕಾರವಾರ: ಸರ್ಕಾರದ ಹೊಸ ಸೂಚನೆ ಪ್ರಕಾರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ. ಆಯುಷ್ಮಾನ್ ಯೋಜನೆ ಅನುಮೋದನೆಗೆ 6 ತಾಸು ಬೇಕು. ಸ್ಕಾನಿಂಗ್ ನಂತರ ಪೂಣಾದಿಂದ ಸ್ಕಾನಿಂಗ್ ವರದಿ ಅಧಿಕೃತವಾಗಿ ವೈದ್ಯರ ಕೈ ಸೇರಲು ಕನಿಷ್ಟ 5 ತಾಸು ಬೇಕು. ಅಷ್ಟರೊಳಗೆ ರೋಗಿ ಬದುಕಿದ್ದರೆ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ!

ತುರ್ತು ಚಿಕಿತ್ಸೆಗಾಗಿ ಶನಿವಾರ ಜಿಲ್ಲಾ ಆಸ್ಪತ್ರೆಗೆ ಬಂದ ರೋಗಿಯೊಬ್ಬರಿಗೆ ಆರು ತಾಸು ಕಾಯಿಸಲಾಗಿದ್ದು, ಸರ್ಕಾರದ ಹೊಸ ಆದೇಶ ತೋರಿಸಿ ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನು ಅರಿತ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ವೈದ್ಯಾಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. `ರೋಗಿಗೆ ಯೋಗ್ಯ ಚಿಕಿತ್ಸೆ ನೀಡದಿದ್ದರೇ ನೀವೇ ಹೊಣೆ’ ಎಂದು ಮಾಧವ ನಾಯಕ ಪಟ್ಟು ಹಿಡಿದ ನಂತರ ಮಾನವೀಯ ನೆಲೆಯಲ್ಲಿ ವೈದ್ಯರು ಚಿಕಿತ್ಸೆ ಶುರು ಮಾಡಿದರು.

ADVERTISEMENT
ADVERTISEMENT

ಅಂಕೋಲಾದ ವಿಶ್ವನಾಥ ಗಾಂವ್ಕರ್ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಅಂಕೋಲಾದ ವೈದ್ಯರು `ತುರ್ತು ಚಿಕಿತ್ಸೆ ಅಗತ್ಯ’ ಎಂದು ನಮೂದಿಸಿ ಅವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದರು. ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾದ ವಿಶ್ವನಾಥ ಗಾಂವ್ಕರ್ ಅವರ ಕುಟುಂಬದವರಿಗೆ ಆ ನಂತರ ಸರ್ಕಾರದ ಹೊಸ ಆದೇಶದ ಬಗ್ಗೆ ಅರಿವಾಗಿದ್ದು, ಆರು ತಾಸುಗಳ ಕಾಲ ಆಸ್ಪತ್ರೆ ಆವರಣದಲ್ಲಿ ಕಾದರು. ಅದಾಗಿಯೂ ಆಯುಷ್ಮಾನ್ ಭಾರತ್ ಯೋಜನೆಯಿಂದ ಅನುಮೋದನೆ ಸಿಗಲಿಲ್ಲ. ಹೀಗಾಗಿ ಅವರು ಬೇರೆ ದಾರಿಯಿಲ್ಲದೇ ಮಾಧವ ನಾಯಕ ಅವರಿಗೆ ಫೋನು ಮಾಡಿದರು.

Advertisement. Scroll to continue reading.
Advertisement. Scroll to continue reading.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಹೊಸ ಸುತ್ತೋಲೆ ಹೊರಡಿಸಿದೆ. ಡಿಸೆಂಬರ್ 1ರಿಂದ ಈ ಆದೇಶ ಅನ್ವಯವಾಗುತ್ತಿದ್ದು, ಇದರಿಂದ ಜನರಿಗೆ ಉಪಯೋಗಕ್ಕಿಂದ ಉಪದ್ರವಗಳೇ ಹೆಚ್ಚು. ಅನಗತ್ಯವಾಗಿ ರೋಗಿಗಳಿಗೆ ಸ್ಕಾನಿಂಗ್ ಮಾಡುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಅನುಸರಿಸಿರುವುದಾಗಿ ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಹೀಗಾಗಿ ರೋಗಿಯೊಬ್ಬರಿಗೆ ಸ್ಕಾನಿಂಗ್ ಮಾಡಬೇಕು ಎಂದು ವೈದ್ಯರು ಶಿಫಾರಸ್ಸು ಮಾಡಿದ ನಂತರವೂ ರೋಗಿಯ ಎಲ್ಲಾ ದಾಖಲೆಗಳನ್ನು ಆನ್‌ಲೈನ್ ಮೂಲಕ ಲಾಗ್‌ಇನ್ ಆಗಿ ಸಲ್ಲಿಸುವುದು ಕಡ್ಡಾಯ. ಅದಾದ ನಂತರ ಆಯುಷ್ಮಾನ್ ಭಾರತ್ ಯೋಜನೆ ಅಡಿ ಅದಕ್ಕೆ ಅನುಮೋದನೆ ನೀಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಸಲು ಆರು ತಾಸು ಬೇಕೇ ಬೇಕು!

ಈ ಎಲ್ಲಾ ವಿಷಯ ಅರಿತ ಮಾಧವ ನಾಯಕ ಕೂಡಲೇ ಆಸ್ಪತ್ರೆಗೆ ಧಾವಿಸಿದರು. ಅಲ್ಲಿನ ವೈದ್ಯಾಧಿಕಾರಿಗಳ ಜೊತೆ ಜಗಳವಾಡಿದರು. ಆ ವೇಳೆ ವೈದ್ಯರು ಸಹ ತಮ್ಮ ಅಸಹಾಯಕತೆ ತೋಡಿಕೊಂಡರು. `ಮೆದುಳಿನ ರಕ್ತಸ್ರಾವ ಹೆಚ್ಚಾದರೆ ರೋಗಿ ಬದುಕುವ ಸಾಧ್ಯತೆ ಕಡಿಮೆ. ಪಾರ್ಶವಾಯುವಿಗೆ ಸಹ ರೋಗಿ ಒಳಗಾಗಬಹುದು’ ಎಂದು ಮಾಧವ ನಾಯಕ ಮನವರಿಗೆ ಮಾಡಿದರು. ಇದಾದ ನಂತರ ಕೊನೆಗೆ ರೋಗಿಯ ಪ್ರಾಣ ಉಳಿಸುವುದಕ್ಕಾಗಿ ಸ್ಕಾನಿಂಗ್ ನಡೆಸಿ, ಚಿಕಿತ್ಸೆ ಶುರು ಮಾಡಿದರು. ಪ್ರಸ್ತುತ ವಿಶ್ವನಾಥ ಗಾಂವ್ಕರ್ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಾಗಿಯೂ ಪೂಣೆಯಿಂದ ಅಧಿಕೃತ ಸ್ಕಾನಿಂಗ್ ವರದಿ ಬಂದಿಲ್ಲ!
`ರೋಗಿಗಳ ಪ್ರಾಣದ ಜೊತೆ ಆಟವಾಡುವ ಇಂಥ ನಿಯಮವನ್ನು ಸರ್ಕಾರ ಹಿಂಪಡೆಯಬೇಕು’ ಎಂದು ಮಾಧವ ನಾಯಕ ಆಗ್ರಹಿಸಿದರು.
ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದದ್ದೇನು? ಮಾಧವ ನಾಯಕರು ವೈದ್ಯರ ಮನವೊಲೈಸಿದ್ದು ಹೇಗೆ? ವಿಡಿಯೋ ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಸರ್ಕಾರಿ ಸರಾಯಿ ಅಂಗಡಿಯಲ್ಲಿನ ಕಾಸು ಕಾಣೆ!

Next Post

ಅವಿಶ್ವಾಸ ಮಂಡನೆ | ಮದನೂರು ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಹಕ್ಕು ಮೊಟಕು!

Next Post

ಅವಿಶ್ವಾಸ ಮಂಡನೆ | ಮದನೂರು ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಹಕ್ಕು ಮೊಟಕು!

ಸತೀಶ್ ಸೈಲ್'ಗೆ ಶೆಟ್ಟಿ.. ಶಿವರಾಮ ಹೆಬ್ಬಾರ್'ಗೆ ಮಿರಾಶಿ.. ಭೀಮಣ್ಣ ನಾಯ್ಕ'ಗೆ ಭಾಗ್ವತ.. ಏನೂ ಇಲ್ಲದ ಅವರೆಲ್ಲ ಶಾಸಕರಿಗೆ ಆಪ್ತರಾಗಿದ್ದು ಹೇಗೆ?!!

ನೂರು ಜನ್ಮಕೂ | ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.