ಕುಮಟಾ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಸಂಬoಧಿಸಿದ ದೂರನ್ನು ಧಾರವಾಡದ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠ ವಜಾಗೊಳಿಸಿದೆ.
ಎರಡನೇ ಅವಧಿಗೆ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ಎಂಬ ಮೀಸಲಾತಿಯನ್ನು ಸರ್ಕಾರ ಘೋಷಿಸಿತ್ತು. ಅಗಸ್ಟ 21ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ದಿನಾಂಕ ನಿಗದಿಪಡಿಸಲಾಗಿತ್ತು. ಆಯ್ಕೆಯ ದಿನದಂದು ಪುರಸಭೆಯ 5ನೆ ವಾರ್ಡನ ಕಾಂಗ್ರೆಸ್ ಸದಸ್ಯೆ ವಿನಯಾ ಶೆರ್ಲಿ ಜಾರ್ಜ ಘೋಷಿತ ಮೀಲಾಸಲಾತಿ ಬದಲು `3ಬಿ’ ಮೀಸಲಾತಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ವಾದಿ ಹಾಗೂ ಪ್ರತಿವಾದಿಗಳ ವಾದ ಆಲಿಸಿದ ಏಕಸದಸ್ಯ ಪೀಠ ವಾದಿ ವಿನಯಾ ಶೆರ್ಲಿ ಜಾರ್ಜ ಅವರ ದೂರನ್ನು ವಜಾಗೊಳಿಸಿ ಆದೇಶ ನೀಡಿದೆ. ಹೀಗಾಗಿ ಕುಮಟಾ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಗೆ ಇದ್ದ ತಡೆ ಉಚ್ಛ ನ್ಯಾಯಾಲಯದ ಈ ಆದೇಶದಿಂದ ನಿವಾರಣೆಯಾಗಿದೆ.