ಭಟ್ಕಳ: ಕೋಕ್ತಿನಗರದ ಕೆರೆ ಪೂರ್ತಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಕೆರೆ ನೀರಿಗೆ ರಕ್ತ ಮಿಶ್ರಣವಾಗಿದ್ದರಿಂದ ಈ ಬಣ್ಣ ಬಂದಿದೆ. ಬಕ್ರೀದ್ ಹಿನ್ನಲೆ ಪ್ರಾಣಿ ವಧೆ ನಡೆಸಿ ರಕ್ತವನ್ನು ಚರಂಡಿ ಮೂಲಕ ಕೆರೆಗೆ ಬಿಟ್ಟಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದರ್ ರೋಡಿನ 2ನೇ ಕ್ರಾಸಿನಲ್ಲಿರುವ ಕೋಕ್ತಿನಗರ ಅಕ್ಕಪಕ್ಕದ ಮನೆ ಕಾಲುವೆಗಳಿಂದ ಈ ರಕ್ತ ಚರಂಡಿಗೆ ಬಂದಿದೆ. ಚರಂಡಿ ಕಾಮಗಾರಿ ಅರೆಬರೆಯಾಗಿದ್ದು, ಕೆರೆ ಸಮೀಪ ಚರಂಡಿ ಒಡೆದಿದೆ. ಅಲ್ಲಿಂದಲೇ ರಕ್ತ ನೀರಿನೊಂದಿಗೆ ಮಿಶ್ರಣವಾಗಿದೆ.
ಚರಂಡಿ ಕೆಲಸ ಇನ್ನೂ ಪೂರ್ತಿ ಆಗದ ಕಾರಣ ಅದನ್ನು ಬಳಸಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಪುರಸಭೆಗೆ ಸಹ ಈ ಚರಂಡಿ ಹಸ್ತಾಂತರವಾಗಿಲ್ಲ. ಅಷ್ಟರ ಒಳಗೆ ಕೆಲವರು ಚರಂಡಿಯಲ್ಲಿ ರಕ್ತ ಹರಿಸಿ, ಕೆರೆಯ ನೀರಿನ ಜೊತೆ ಮಿಶ್ರಣ ಮಾಡಿದ್ದಾರೆ.
Discussion about this post