ಭಾರತ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಗುರುರಾಜ ಬಂಡಿವಡ್ಡರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾನಗಲ್ ಮೂಲದ ಗುರುರಾಜ ಬಂಡಿವಡ್ಡರ್ ಭಾರತ್ ಮೈಕ್ರೋ ಫೈನಾನ್ಸ್ ಕಂಪನಿ ಮೂಲಕ ಸಾಲ ವಸೂಲಿ ಮಾಡುತ್ತಿದ್ದರು. ಸುಂಕಸಾಳ ಹಾಗೂ ಸುತ್ತಲಿನ ಭಾಗದಲ್ಲಿ ಅವರು ಹೆಚ್ಚಿಗೆ ಓಡಾಡಿಕೊಂಡಿದ್ದರು. ಶುಕ್ರವಾರ ಸಹ ಅವರು ಸಾಲ ವಸೂಲಿ ಮಾಡಿ 40 ಸಾವಿರ ರೂ ಹಣ ಸಂಗ್ರಹಿಸಿದ್ದರು. ಆದರೆ, ಈ ಹಣ ಕಾಣೆಯಾಗಿತ್ತು.
ಹಣ ಕಾಣೆಯಾಗಿದ್ದರಿಂದ ಕಂಗಾಲಾದ ಗುರುರಾಜ ಬಂಡಿವಡ್ಡರ್ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಮೊದಲು ಕೈ ಕೊಯ್ದುಕೊಂಡ ಅವರು ನಂತರ ಕತ್ತನ್ನು ಕೊರೆದುಕೊಂಡಿದ್ದಾರೆ. ಈ ಸುದ್ದಿ ತಿಳಿದ ಸಹೋದ್ಯೋಗಿಗಳು ಅಸ್ವಸ್ಥಗೊಂಡ ಗುರುರಾಜ ಬಂಡಿವಡ್ಡರ್’ರನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.



