ಬಿಡುವಿನ ವೇಳೆ ಮೀನು ಹಿಡಿಯಲು ಕರೆಗೆ ಹೋದ ವ್ಯಕ್ತಿಯೊಬ್ಬ ಅದೇ ಕೆರೆಯ ನೀರು ಕುಡಿದು ಸಾವನಪ್ಪಿದ್ದಾನೆ. ನೀರಿನಲ್ಲಿ ತೇಲುತ್ತಿದ್ದ ಶವವನ್ನು ಪೊಲೀಸರು ಮೇಲೆತ್ತಿದ್ದಾರೆ.
ಗುಡ್ಡಪ್ಪ ಜಾಡರ್ (58) ಎಂಬಾತ ಶನಿವಾರ ಮುಂಡಗೋಡಿನ ಸಾಲಗಾಂವ ಕೆರೆಗೆ ಮೀನು ಹಿಡಿಯಲು ಹೋಗಿದ್ದ. ಅಪಾಯದ ಅರಿವಿದ್ದರೂ ಕೆರೆಯಲ್ಲಿ ಮುಂದೆ ಹೋದವ ಅಲ್ಲಿಯೇ ಮುಳುಗಿದ್ದ. ಸಾಕಷ್ಟು ಹುಡುಕಾಟ ನಡೆಸಿದರೂ ಗುಡ್ಡಪ್ಪ ಜಾಡರ್ ಪತ್ತೆಯಾಗಲಿಲ್ಲ.
ಅದಾದ ನಂತರ ಆತನ ಶವ ಕೆರೆಯಲ್ಲಿ ತೇಲಿ ಬಂದಿದ್ದು, ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಮುಂಡಗೋಡ ಪಿಎಸ್‌ಐ ಪರಶುರಾಮ ಮಿರ್ಜಗಿ ಕೆರೆಗೆ ಹಾರಿ ಆ ಶವವನ್ನು ಮೇಲೆತ್ತಿದರು.