`ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಡವರ ವಿರೋಧಿಯಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹೇಳಿದ್ದಾರೆ. ಬಜೆಟ್ ವಿರೋಧಿಸಿ ಅವರು ಪ್ರತಿಭಟನೆಗೆ ಕರೆ ನೀಡಿದ್ದಾರೆ.
`ಕಾರ್ಪೋರೇಟ್ ಕಂಪನಿ ಹಾಗೂ ಶ್ರೀಮಂತರಿಗಾಗಿ ಸಿದ್ಧಪಡಿಸಿದ ಬಜೆಟ್ ಇದಾಗಿದ್ದು, ಕಾರ್ಮಿಕರು ಹಾಗೂ ರೈತರಿಗೆ ಈ ಬಜೆಟಿನಿಂದ ಯಾವುದೇ ಪ್ರಯೋಜನವಿಲ್ಲ. ಜಿಡಿಪಿಗೆ ಕೃಷಿ ಮತ್ತು ಸಂಬoಧಿತ ವಲಯಗಳ ಕೊಡುಗೆಯು ಬಜೆಟ್‌ನಲ್ಲಿ 16 ಪ್ರತಿಶತಕ್ಕೆ ಏರಿಸಲಾಗಿದೆ. 2024-25ರ ಪರಿಷ್ಕೃತ ಅಂದಾಜುಗಳಿಗಿAತ ಕೃಷಿ ಮತ್ತು ಸಂಬAಧಿತ ಚಟುವಟಿಕೆಗಳಿಗೆ ಹಂಚಿಕೆ ಕಡಿಮೆಯಾಗಿದೆ’ ಎಂದವರು ವಿಶ್ಲೇಷಿಸಿದ್ದಾರೆ. `ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರೈತರಿಗೆ ಆದ್ಯತೆ ಕೊಟ್ಟಿಲ್ಲ. ಕೃಷಿ ಉತ್ಪನ್ನ ಖರೀದಿ ವಿಸ್ತರೆಣೆ ಕುರಿತು ಬಜೆಟ್‌ನಲ್ಲಿ ಏನೂ ಇಲ್ಲ. ರೈತರನ್ನು ಸಾಲಭಾಧೆಯಿಂದ ಮುಕ್ತಗೊಳಿಸುವ ಹಾಗೂ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸ್ಸುಗಳನ್ನು ಗಾಳಿಗೆ ತೂರಲಾಗಿದೆ’ ಎಂದವರು ಹೇಳಿದ್ದಾರೆ.
ಇದಲ್ಲದೇ, `ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಗೆ ಒತ್ತು ನೀಡಿಲ್ಲ. ಆಹಾರ ಸಬ್ಸಿಡಿ ಸಹ ಮೊದಲಿಗಿಂತ ಕಡಿಮೆಯಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆ ವಿಮೆಗೆ ನೀಡಲಾದ ಹಂಚಿಕೆಯು ಕಡಿತವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಹಂಚಿಕೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ರಸಗೊಬ್ಬರ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡಲಾಗಿದ್ದು, ಮುಂದಿನ 4 ವರ್ಷಗಳವರೆಗೆ ಬೇಳೆಕಾಳುಗಳನ್ನು ಸಂಗ್ರಹಿಸುತ್ತವೆ ಎಂಬ ಹೇಳಿಕೆಯಲ್ಲಿ ಹೊಸದೇನೂ ಇಲ್ಲ’ ಎಂದವರು ಹೇಳಿದ್ದಾರೆ.
ರೈತ ವಿರೋಧಿ ಬಜೆಟ್ ವಿರುದ್ಧ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆಗೆ ಕರೆ ನೀಡಲಿದೆ ಎಂದು ಶಾಂತರಾಮ ನಾಯಕ ಅವರು ಘೋಷಿಸಿದ್ದಾರೆ.