ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಯುವತಿ ಕಾಣೆಯಾಗಿದ್ದಾರೆ. ಎಷ್ಟು ಹುಡುಕಿದರೂ ಆಕೆಯ ಸುಳಿವು ಸಿಗದ ಕಾರಣ ಯುವತಿಯ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.
ಯಲ್ಲಾಪುರದ ಕಿರವತ್ತಿ ಬಳಿಯ ಜಯಂತಿನಗರದ ರಕ್ಷಿತಾ ಚಂದಾವರ (20) ಶನಿವಾರ ಶಿರಸಿಗೆ ಬಂದಿದ್ದರು. ಹಳೆ ಬಸ್ ನಿಲ್ದಾಣದ ಬಳಿಯಿರುವ ಅಂಗಡಿಗೆ ಹೋಗಿ ಬರುವುದಾಗಿ ಅವರ ತಾಯಿ ಲತಾ ಚಂದಾವರ ಬಳಿ ಹೇಳಿದ್ದರು. ಅಂಗಡಿಗೆ ಹೋದ ಅವರು ಎಷ್ಟು ಹೊತ್ತು ಕಳೆದರೂ ಮರಳಲಿಲ್ಲ. ಲತಾ ಅವರು ಅಂಗಡಿ ಕಡೆ ಹೋಗಿ ನೋಡಿದರು. ಬಸ್ ನಿಲ್ದಾಣದ ಸುತ್ತಲು ರಕ್ಷಿತಾ ಅವರ ಹುಡುಕಾಟ ನಡೆಸಿದರು. ಆದರೆ, ಎಲ್ಲಿಯೂ ರಕ್ಷಿತಾ ಕಾಣಲಿಲ್ಲ.
ಸಂಬ0ಧಿಕರ ಮನೆ, ಪರಿಚಯಸ್ಥರ ಮನೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿ ಸಹ ರಕ್ಷಿತಾ ಬಂದಿರುವ ಬಗ್ಗೆ ಯಾರೂ ಹೇಳಲಿಲ್ಲ. ಬಸ್ ನಿಲ್ದಾಣಕ್ಕೆ ಬಂದ ಯುವತಿ ಏಕಾಏಕಿ ಕಾಣೆಯಾದ ಬಗ್ಗೆ ಜನವರು ಅಚ್ಚರಿಗೆ ಒಳಗಾದರು.
ಕೊನೆಗೆ ಅನೇಕರ ಸಲಹೆ ಪಡೆದು ಲತಾ ಅವರು ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಕ್ಷಿತಾ ಅವರ ಹುಡುಕಾಟ ನಡೆಸುತ್ತಿದ್ದಾರೆ. ರಕ್ಷಿತಾ ಅವರು ಕನ್ನಡ ಹಾಗೂ ಕೊಂಕಣಿ ಮಾತನಾಡುತ್ತಾರೆ.
ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ. ರಕ್ಷಿತಾ ಅವರನ್ನು ಕಂಡಲ್ಲಿ ಇಲ್ಲಿ ಫೋನ್ ಮಾಡಿ: 9480805264



