ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ನಿವೃತ್ತ ನೌಕರರ ಸಂಘ ಬಗೆ ಬಗೆಯ ಸ್ಪರ್ಧೆ ಆಯೋಜಿಸಿದೆ. ಫೆ 18ರಂದು ಕಾರವಾರದ ಡಿ ಜಿ ಸಾವಂತ ಸಭಾಭವನದಲ್ಲಿ ಈ ಸ್ಪರ್ಧೆ ನಡೆಯಲಿದೆ.
ಸಂಘದ ಸದಸ್ಯರಿಗೆ ಸಂಗೀತ ಕುರ್ಚಿ, ಬಕೆಟಿನಲ್ಲಿ ಚೆಂಡು ಎಸೆಯುವಿಕೆ, ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ ಸ್ಪರ್ಧೆ ಆಯೋಜಿಸಲಾಗಿದೆ. ಸ್ಮರಣೆ ಪರೀಕ್ಷೆ ಜೊತೆ ಆಶುಭಾಷಣ ಸ್ವರ್ಧೆ ಸಹ ನಡೆಯಲಿದೆ. ಸ್ಪರ್ಧೆಯಲ್ಲಿ ಎರಡು ವಿಭಾಗಗಳಿವೆ. 60ರಿಂದ 69 ವರ್ಷದವರೆಗೆ ಒಂದು ವಿಭಾಗ ಹಾಗೂ 70ರಿಂದ 80 ವರ್ಷ ಮೇಲ್ಪಟ್ಟವರಿಗೆ ಇನ್ನೊಂದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಆ ದಿನ ಬೆಳಗ್ಗೆ 9.30ಕ್ಕೆ ಸಂಘದ ಕಾರ್ಯಾಲಯಕ್ಕೆ ಬಂದು ಹೆಸರು ಕೊಡಬೇಕು. 9.30ಕ್ಕೆ ಸರಿಯಾಗಿ ಕಾರ್ಯಕ್ರಮ ಶುರುವಾಗಲಿದೆ.
ಇನ್ನೂ ಸ್ಪರ್ಧೆಯಲ್ಲಿ ವಿಜೇತರಾದವವರಿಗೆ 3 ಬಹುಮಾನಗಳಿವೆ. ಕಾರವಾರ ತಾಲೂಕಿನ ನಿವೃತ್ತ ನೌಕರರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ವಿ ಎಂ ಹೆಗಡೆ ಹೇಳಿದ್ದಾರೆ. ಮಾಹಿತಿಗೆ ಇಲ್ಲಿ ಫೋನ್ ಮಾಡಿ: ಅನಿಲ ಎಸ್ ಮಡಿವಾಳ 9449574293