ಕಳೆದ ಮಳೆಗಾಲದಲ್ಲಿ ಮುರಿದು ಬಿದ್ದಿದ್ದ ಕಾಳಿ ಸೇತುವೆ ಇದೀಗ ಮತ್ತೊಮ್ಮೆ ಮುರಿದಿದೆ. ಗುರುವಾರ ರಾತ್ರಿ ಸೇತುವೆಯ ಒಂದು ಭಾಗ ತುಂಡಾಗಿದ್ದು, ಇದನ್ನು ನೋಡಲು ನೂರಾರು ಜನ ಬರುತ್ತಿದ್ದಾರೆ.
ಕಾರವಾರದಿಂದ ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿನ ಕಾಳಿ ಸೇತುವೆ ಮಳೆಗಾಲದಲ್ಲಿ ಮುರಿದಿತ್ತು. ಪರಿಣಾಮ ಸೇತುವೆ ಕೆಳಭಾಗದಲ್ಲಿ ಲಾರಿ ಸಿಕ್ಕಿ ಬಿದ್ದಿತ್ತು. ಲಾರಿ ಚಾಲಕನನ್ನು ರಕ್ಷಿಸಿದ್ದರು. ಅದೇ ಭಾಗದಲ್ಲಿ ಇದೀಗ ಸೇತುವೆಯ ಸ್ಲಾಬ್ ಕುಸಿತಿದೆ. ಸೇತುವೆ ತೆರವು ಕಾರ್ಯಾಚರಣೆ ವೇಳೆ ಈ ಅವಘಡ ನಡೆದಿದೆ.
ಕಳೆದ ಕೆಲವು ತಿಂಗಳಿನಿoದ ಹಳೆ ಸೇತುವೆಯ ಭಾಗವನ್ನು ಹಂತ ಹಂತವಾಗಿ ತೆರವು ಮಾಡಲಾಗುತ್ತಿದೆ. ಮುರಿದು ಬಿದ್ದ ಸೇತುವೆಯ ಒಂದು ಭಾಗದ ಪಿಲ್ಲರ್ ಕೆಳಭಾಗದಲ್ಲಿ ಕಳಚಿದೆ. ಇದರಿಂದಾಗಿ ಸಮತಟ್ಟಾಗಿದ್ದ ಆ ಸೇತುವೆಯ ಸ್ಲಾಬ್ ಮೇಲ್ಮುಖವಾಗಿ ನಿಂತುಕೊAಡಿದೆ. ಈಗ ಮುರಿದು ಮೇಲ್ಮುಖವಾಗಿ ನಿಂತ ಸೇತುವೆ ಹೊಸ ಸೇತುವೆಗೆ ಅಪ್ಪಳಿಸಿದ್ದರೆ ಆ ಸೇತುವೆಗೂ ಸಹ ದೊಡ್ಡ ಮಟ್ಟದ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ಇನ್ನಷ್ಟು ಎಚ್ಚರಿಕೆಯಲ್ಲಿ ಅಲ್ಲಿ ಕೆಲಸ ಮಾಡಲಾಗುತ್ತಿದೆ.