ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 ಹಾಗೂ 6ನೇ ಘಟಕ ಸ್ಥಾಪನೆ ಕೆಲಸಗಳು ಜೋರಾಗಿದೆ. `ಮೇಘಾ ಇಂಜಿನಿಯರಿoಗ್ ಇನ್ಪಾಸ್ಟಕ್ಚರ್ ಕಂಪನಿ’ ಈ ಕೆಲಸ ನಿರ್ವಹಿಸುವ ಗುತ್ತಿಗೆ ಪಡೆದಿದೆ.
ಕೈಗಾದಲ್ಲಿ ಸದ್ಯ ನಾಲ್ಕು ಘಟಕಗಳ ಮೂಲಕ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. 21ಸಾವಿರ ಕೋಟಿ ರೂ ವೆಚ್ಚದಲ್ಲಿ ಇನ್ನೆರಡು ಘಟಕ ಸ್ಥಾಪನೆಗೆ ಸರ್ಕಾರ ಆಸಕ್ತಿವಹಿಸಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದರೂ ವಿರೋಧದ ಧ್ವನಿ ಗಟ್ಟಿಯಾಗಿಲ್ಲ. ಹೀಗಾಗಿ ಸದ್ಯ ಘಟಕ ನಿರ್ಮಾಣಕ್ಕೆ ಗುತ್ತಿಗೆ ಕಂಪನಿಯ ಆಯ್ಕೆ ನಡೆದಿದೆ.
ಐದು ಹಾಗೂ ಆರನೇ ಘಟಕದಿಂದ ತಲಾ 700 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. 2017ರಲ್ಲಿ ಕೇಂದ್ರ ಸಚಿವ ಸಂಪುಟ ಇದಕ್ಕೆ ಅನುಮೋದನೆಯನ್ನು ನೀಡಿದೆ. ಸದ್ಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 210 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 5 ಹಾಗೂ 6ನೇ ಘಟಕ ನಿರ್ಮಾಣದ ನಂತರ ಕೈಗಾದಲ್ಲಿ 2.280 ಮೇಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ.
ಇನ್ನೂ ವಿದ್ಯುತ್ ಸಚಿವಾಲಯದ ಮಾನದಂಡಗಳ ಪ್ರಕಾರ, ಕರ್ನಾಟಕವು ಈ ಯೋಜನೆಯಿಂದ 700 ಮೆಗಾವ್ಯಾಟ್ ಪಾಲನ್ನು ಮತ್ತು 210 ಮೆಗಾವ್ಯಾಟ್‌ನ ಹಂಚಿಕೆಯಾಗದ ಕೋಟಾದಲ್ಲಿ ಒಂದು ಪಾಲು ಪಡೆಯಲಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ.