ಭೂಮಿ ಹಕ್ಕಿನ ವಿಷಯವಾಗಿ ಅರಣ್ಯವಾಸಿಗಳಿಗೆ ಕಾನೂನು ಅರಿವು ಮೂಡಿಸುವ ನ್ಯಾಯವಾದಿ ರವೀಂದ್ರ ನಾಯ್ಕ ಅವರ ಪ್ರಯತ್ನಕ್ಕೆ ಸಚಿವ ಸತೀಶ ಜಾರಕಿಹೊಳಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ.
ಫೆ 19ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸಚಿವರನ್ನು ಭೇಟಿ ಮಾಡಿದರು. ಈ ವೇಳೆ ಕಾನೂನು ಜಾಗೃತ ಜಾಥಾ ಬಗ್ಗೆ ಅರಿತ ಸಚಿವರು ಮೆಚ್ಚುಗೆಯ ಮಾತನಾಡಿದರು. ಕಾನೂನು ಜಾಗೃತ ಅಂಗವಾಗಿ ಮುದ್ರಿಸಿದ ಕರಪತ್ರದಲ್ಲಿನ ಭೂಮಿ ಹಕ್ಕಿಗೆ ಸಂಬoಧಿಸಿ ಕಾನೂನು ಅಂಶಗಳ ವಿವರವನ್ನು ರವೀಂದ್ರ ನಾಯ್ಕ ವಿವರಿಸಿದರು. ರಾಜ್ಯದ ಎಲ್ಲಡೆ ಈ ಜಾಥಾ ಸಂಚರಿಸುವ ಬಗ್ಗೆ ಮಾಹಿತಿ ನೀಡಿದರು.
`ಅಸಮರ್ಪಕ ಮತ್ತು ಅಪೂರ್ಣವಾದ ಅರಣ್ಯ ಹಕ್ಕು ಸಮಿತಿಯಿಂದ ಅರಣ್ಯವಾಸಿಗಳ ಅರ್ಜಿಗಳನ್ನ ಪುನರ್ ಪರಿಶೀಲಿಸುವ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಈ ಹಿಂದೆ ಒತ್ತಾಯಿಸಿದಾಗ ಸಚಿವ ಸತೀಶ ಜಾರಕಿಹೊಳಿ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನಲೆ ಕಾನೂನುಬಾಹಿರ ಪುನರ್ ಪರಿಶೀಲನಾ ಪ್ರಕ್ರಿಯೆ ಸ್ಥಗಿತವಾಗಿತ್ತು. ಬುಧವಾರ ಮಾನವ ಬಂಧು ವೇದಿಕೆಯ ಪ್ರಮುಖ ಅನಂತ ನಾಯ್ಕ ಸಹ ರವೀಂದ್ರ ನಾಯ್ಕರ ಜೊತೆಗಿದ್ದರು.