ಗುಣಮಟ್ಟದ ಮರಗಳನ್ನು ಬಳಸಿ ಮನೆ ನಿರ್ಮಿಸಿಕೊಳ್ಳಬೇಕು ಎಂದುಕೊoಡವರಿಗೆ ದಾಂಡೇಲಿ ಮರಮಟ್ಟು ಸಂಗ್ರಹಾಲಯದಿoದ ಮರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫೆ 21ರಿಂದ 25ರವರೆಗೆ ಇಲ್ಲಿ ಮತ್ತಿ, ನಂದಿ, ಹೊನ್ನೆ, ತೇಗ, ಸಾಗವಾನಿ, ಕರಮುತ್ತಲ, ಜಂಬೆ, ಕಿಂದಳ, ಹೆದ್ದಿ ಸೇರಿ ವಿವಿಧ ದಿಮ್ಮಿಗಳ ಹರಾಜು ಪ್ರಕ್ರಿಯೆ ನಡೆಯಲಿದೆ
ದಾಂಡೇಲಿ, ಹಳಿಯಾಳ, ಜೋಯಿಡಾ, ಭಗವತಿ, ಬರ್ಚಿ, ಸಾಂಬ್ರಾಣಿ, ವಿರ್ನೋಲಿ, ತಿನೈಘಾಟ್ ಮತ್ತು ಜಗಲಬೆಟ್ ಕಾಡುಗಳಿಂದ ಪಡೆದ 1481 ಮರದ ತುಂಡುಗಳು ಹರಾಜಿನಲ್ಲಿರಲಿವೆ. 2300 ಘನ ಮೀಟರ್’ನ್ನು ಹರಾಜು ಹಾಕಲಾಗುತ್ತದೆ.
ಪ್ರತಿಯೊಂದು ಲಾಟ್ ಉದ್ದ, ಸುತ್ತಳತೆ ಮತ್ತು ಗುಣಮಟ್ಟದ ವರ್ಗವನ್ನು ವಿವರಿಸಲಾಗಿದೆ. ಹರಾಜಿಗೂ ಮುನ್ನ ಮರದ ನಾಟಾ ಪರಿಶೀಲನೆಗೆ ಅವಕಾಶವಿದ್ದು, ಇ-ಹರಾಜಿನ ಮೂಲಕವೂ ಪಡೆಯುವ ಅವಕಾಶವಿದೆ. ಉತ್ತಮ ಮರ ಹುಡುಕಾಟ ನಡೆಸುತ್ತಿರುವವರಿ ದಾಂಡೇಲಿ ಡಿಪೋ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಫೋನ್ ನಂ: 94836 68784 ಅಥವಾ 9773078388