6
  • Latest

ಯೂಟೂಬ್ ಪತ್ರಕರ್ತನಿಗೆ ಧರ್ಮದೇಟು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯೂಟೂಬ್ ಪತ್ರಕರ್ತನಿಗೆ ಧರ್ಮದೇಟು!

AchyutKumar by AchyutKumar
in ಸ್ಥಳೀಯ

ರೈತರನ್ನು ಬೆದರಿಸಿ ಹಣ ವಸೂಲಿಗೆ ಮುಂದಾಗಿದ್ದ ಯೂಟೂಬ್ ಪತ್ರಕರ್ತನಿಗೆ ಮುಂಡಗೋಡಿನ ಜನ ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿ ಬಿಟ್ಟು ಕಳುಹಿಸಿದ್ದಾರೆ.

ಮುಂಡಗೋಡಿನ ಕೆಲ ರೈತರು ಹೊಟ್ಟೆಪಾಡಿಗಾಗಿ ಇಟ್ಟಂಗಿ ತಯಾರಿಸುತ್ತಾರೆ. ಆದರೆ, ಇಟ್ಟಂಗಿ ತಯಾರಿಕೆಗೆ ಅವರು ಅನುಮತಿ ಪಡೆದಿಲ್ಲ. ಹೀಗಾಗಿ ತಹಶೀಲ್ದಾರರು ಈಗಾಗಲೇ ಅನೇಕರಿಗೆ ನೋಟಿಸ್ ನೀಡಿದ್ದು, ಕೆಲ ದಾಸ್ತಾನುಗಳನ್ನು ಧ್ವಂಸ ಮಾಡಿದ್ದಾರೆ.

ತಯಾರಿಸಿದ ಇಟ್ಟಂಗಿ ಧ್ವಂಸವಾಗಿದ್ದರಿoದ ಅಲ್ಲಿನ ರೈತರು ಸಂಕಷ್ಟದಲ್ಲಿದ್ದು, ಈ ನಡುವೆ ಕಾತೂರಿನ ಬಸು ಮನೆಹಾಳ (ಹೆಸರು ಬದಲಿಸಿದೆ) ಎಂಬ ನಕಲಿ ಪತ್ರಕರ್ತನೊಬ್ಬ ಇಟ್ಟಂಗಿ ತಯಾರಕರ ಬೆನ್ನಿಗೆ ಬಿದ್ದಿದ್ದ. ತನಗೆ 25 ಸಾವಿರ ರೂ ಕೊಡವಂತೆ ಆತ ದುಂಬಾಲು ಬಿದ್ದಿದ್ದ. ಅವರನ್ನು ಬೆದರಿಸಿ ಹಣ ಕೀಳುವ ಪ್ರಯತ್ನ ಮಾಡಿದ್ದು, ಆತನ ಮನೆಯೊಳಗೆ ನುಗ್ಗಿದ ಐದಾರು ಜನ ಹಿಗ್ಗಾ-ಮುಗ್ಗ ಥಳಿಸಿದ್ದಾರೆ.

ನಂತರ ಮನೆಯಿಂದ ಹೊರಗೆ ಎಳೆದು ತಂದು ಅಲ್ಲಿಯೂ ಗೂಸಾ ನೀಡಿದ್ದಾರೆ. ಈತ ತನ್ನದೇ ಆದ ಪತ್ರಿಕೆಯೊಂದನ್ನು ನಡೆಸುತ್ತಿದ್ದು, ಅದು ಸರಿಯಾಗಿ ಪ್ರಕಟವಾಗುತ್ತಿರಲಿಲ್ಲ. ಯೂಟೂಬ್ ಚಾನಲ್‌ವೊಂದನ್ನು ತೆರೆದಿದ್ದು, ಅಲ್ಲಿಯೂ ಯಾವುದೇ ವರದಿ ಪ್ರಸಾರ ಆಗುತ್ತಿರಲಿಲ್ಲ. ಅದಾಗಿಯೂ ಯೂಟೂಬ್ ಮೂಲಕ ಸುದ್ದಿ ಪ್ರಸಾರ ಮಾಡದೇ ಇರಲು ಇಟ್ಟಂಗಿ ತಯಾರಿಸುವ ರೈತರೊಬ್ಬರಿಗೆ 25 ಸಾವಿರ ರೂ ಕೇಳಿದಕ್ಕಾಗಿ ಆತನಿಗೆ ಒದೆ ಬಿದ್ದಿದೆ.

ವಾರದ ಹಿಂದೆ ನಕಲಿ ಪತ್ರಕರ್ತನ ಪುತ್ರನೂ ಪ್ರಕರಣವೊಂದರಲ್ಲಿ ರಂಪಾಟ ನಡೆಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ. ಇದೀಗ ಪೊಲೀಸ್ ಠಾಣೆಯಲ್ಲಿ ಆತ `ಇನ್ಮುಂದೆ ಈ ರೀತಿ ಮಾಡುವುದಿಲ್ಲ’ ಎಂದು ಬರೆದುಕೊಟ್ಟಿದ್ದಾನೆ.

ShareSendTweetShare
Previous Post

ಪಂಪನ ನಾಡಿನಲ್ಲಿ ಹಬ್ಬದ ಕಲರವ: ರಾಣಿ ನಿವಾಸದಲ್ಲಿ ಮತ್ತೊಂದು ಉತ್ಸವ!

Next Post

ಕೂಲಿ ಕಾರ್ಮಿಕರಿಗೆ ಜೂಜಾಟದ ವ್ಯಾಮೋಹ!

Next Post
Gambling in the name of Friends Club: 17 people sentenced to prison!

ಕೂಲಿ ಕಾರ್ಮಿಕರಿಗೆ ಜೂಜಾಟದ ವ್ಯಾಮೋಹ!

ಅಡಿಕೆ ಮಂಡಳಿ ಸ್ಥಾಪನೆ ವಿಚಾರ: ಮೌನ ಮುರಿಯದ ಸರ್ಕಾರ!

PUC | ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ: ಕಠಿಣ ಕ್ರಮಕ್ಕೆ ಡಿಡಿಪಿಯು ನಕಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.