ಐದು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರದ ಮಾವಳ್ಳಿ ಜಾತ್ರೆಯಲ್ಲಿ ಜೂಜಾಟ ನಡೆದಿದೆ. ದೇವಿ ಜಾತ್ರೆಯಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಕೆಲಸವನ್ನು ಪೊಲೀಸರು ತಡೆದಿದ್ದಾರೆ.
ಮಾವಳ್ಳಿ ಜಾತ್ರೆಗಾಗಿ ಎಲ್ಲಡೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಆ ವಿದ್ಯುತ್ ದೀಪದ ಬೆಳಕಿನಲ್ಲಿ ಯಲ್ಲಾಪುರದ ಮೂವರು ಗುಡುಗುಡಿ ನಡೆಸಿ ಹಣ ಪಡೆಯುತ್ತಿದ್ದರು. ಸೂರ್ಯ-ಚಂದ್ರ, ಇಸ್ಪಿಟ್ ಎಲೆಗಳ ಮೇಲೆ ಅವರು ಹಣ ಹೂಡುವಂತೆ ಜನರನ್ನು ಪ್ರಜೋದಿಸುತ್ತಿದ್ದರು. ಪೊಲೀಸರನ್ನು ಕಂಡ ಅವರು ಅಲ್ಲಿಂದ ಪರಾರಿಯಾದರು.
ಮಾವಳ್ಳಿಯ ನೀರಿನ ಟಾಕಿಯ ಬಳಿ ಜೂಜಾಡಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 510ರೂ ಹಣ ಸಿಕ್ಕಿದೆ. ಪಿಎಸ್‌ಐ ಶೇಡ್‌ಜಿ ಚೌಹಾಣ್ ತಂಡದವರು ಈ ದಾಳಿ ನಡೆಸಿದ್ದಾರೆ.




